Skip to main content


ಕಿರುತೆರೆ ಪಯಣ ಮುಂದುವರಿಸಿದ ಗುಳಿಕೆನ್ನೆ ಬೆಡಗಿ: ಮಜಾ ಭಾರತದಲ್ಲಿ ರಚಿತಾ ರಾಮ್

ಹಲವು ಸಿನಿಮಾ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಿರುವ ನಟಿ ರಚಿತಾ ರಾಮ್, ಕಿರುತೆರೆಯಲ್ಲಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ,  ಕಿರುತೆರೆಯಿಂದ ಬೆಳ್ಳಿ ಪರದೆಗೆ ಕಾಲಿರಿಸಿದ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಅತ್ಯಂತ ಯಶಸ್ಸು ಕಂಡ ನಟಿ. ನಟಿ ಸೃಜನ್ ಲೋಕೇಶ್ ಜೊತೆ ಕಾಮಿಡಿ ಟಾಕೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಚಿತಾ ಕಿರುತೆರೆಯಲ್ಲಿ ತಮ್ಮ ನಗುವನ್ನು ಮುಂದುವರಿಸಲಿದ್ದಾರೆ. ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರವಾಗುವ ಮಜಾ ಭಾರತ ಕಾರ್ಯಕ್ರಮದ ಜಡ್ಜ್ ಆಗಿ ಕೆಲಸ ಮಾಡಲಿದ್ದಾರೆ.   

short by Pawan / more at Kannada Prabha

Comments