Skip to main content


ಕರುನಾಡ ಚಕ್ರವರ್ತಿ ಶಿವಣ್ಣನ ಹಿಂದಿಕ್ಕಿದ ಅಭಿನಯ ಚಕ್ರವರ್ತಿ ಸುದೀಪ್!

ಹೌದು ಶಿವಣ್ಣ ಮತ್ತು ಸುದೀಪ್ ನಟನೆಯ ದಿ ವಿಲನ್ ಚಿತ್ರ ಟೀಸರ್ ಬಿಡುಗಡೆಯಾಗಿದೆ. ಉಭಯ ನಾಯಕರು ಕಾಣಿಸಿಕೊಂಡಿರುವ ಎರಡು ಪ್ರತ್ಯೇಕ ಟೀಸರ್ ಬಿಡುಗಡೆಯಾಗಿದ್ದು ಶಿವಣ್ಣರ ಟೀಸರ್ ಗಿಂತ ಸುದೀಪ್ ಟೀಸರ್ ವೀಕ್ಷಣೆಯಲ್ಲಿ ಮುಂದಿದೆ. ಎರಡು ಟೀಸರ್ ಗಳು ನಿನ್ನೆಯೇ ಏಕಕಾಲಕ್ಕೆ ಬಿಡುಗಡೆಯಾಗಿತ್ತು. ಇದರಲ್ಲಿ ಸುದೀಪ್ ಟೀಸರ್ 12 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿದ್ದರೆ ಶಿವಣ್ಣರ ಟೀಸರ್ 8 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಆಗಿದೆ. ಬಹುಕೋಟಿ ವೆಚ್ಚದ ದಿ ವಿಲನ್ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶಿಸಿದ್ದು ಚಿತ್ರವನ್ನು ಸಿಆರ್ ಮನೋಹರ್ ನಿರ್ಮಿಸಿದ್ದಾರೆ.   

short by Pawan!

Comments