Skip to main content


ಕಾಂಗ್ರೆಸ್‌ ದಿವಾಳಿ: ದುಂದುವೆಚ್ಚಕ್ಕೆ ಬ್ರೇಕ್‌!

ದಿವಾಳಿ ಎದ್ದಿರುವ ಕಾಂಗ್ರೆಸ್‌ ಪಕ್ಷವು ತನ್ನ ನಾಯಕರ ದುಂದುವೆಚ್ಚಷಕ್ಕೆ ಕಡಿವಾಣ ಹಾಕಲು ಮುಂದಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಆದಾಯ ಕೂಡ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ಪಕ್ಷದ ಸಭೆಗಳು, ಆಚರಣೆಗಳು, ಕಂಪ್ಯೂಟರ್ ವಿಭಾಗ, ಸುದ್ದಿಗಳ ಪ್ರಸಾರ, ಮಾಧ್ಯಮ ವಿಭಾಗ ಮತ್ತು ಇತರ ಕ್ಷೇತ್ರಗಳಲ್ಲಿ ವೆಚ್ಚಕ್ಕೆ ಭಾರೀ ಕಡಿವಾಣ ಹಾಕಲಾಗುತ್ತಿದೆ.

2016-17ನೇ ಸಾಲಿನಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಅನುದಾನದಲ್ಲಿ ಕೂಡ ಭಾರೀ ಇಳಿಮುಖವಾಗಿದೆ. ಉದಾಹರಣೆಗೆ 2015-16ರಲ್ಲಿ ಪಕ್ಷಕ್ಕೆ ಸಂಬಂಧಪಟ್ಟ ಸಭೆಗಳಿಗೆ 17.45 ಕೋಟಿ ರೂಪಾಯಿಗಳನ್ನು ನೀಡಿದರೆ 2016-17ರಲ್ಲಿ 8.31 ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. ಪಕ್ಷದಲ್ಲಿನ ಸಂಭ್ರಮಾಚರಣೆಗಳಿಗೆ 2015-16ರಲ್ಲಿ 4.9 ಕೋಟಿಯಾದರೆ 2016-17ರಲ್ಲಿ 23.75 ಲಕ್ಷಕ್ಕೆ ಇಳಿಕೆಯಾಗಿದೆ.   

short by Pawan / more at Vishwavani

Comments