Skip to main content


'ಕೆಜಿಎಫ್' ಮೇಕಿಂಗ್ ಬಗ್ಗೆ ದುನಿಯಾ ಸೂರಿ ಫಿದಾ

ರಾಕಿಂಗ್ ಸ್ಟಾರ್ ಯಶ್ ಕೆರಿಯರ್ ನಲ್ಲಿ ಬರುತ್ತಿರುವ ಮಹತ್ವದ ಸಿನಿಮಾ 'ಕೆಜಿಎಫ್'. 'ಕೆಜಿಎಫ್' ಸಿನಿಮಾದ ಮೇಕಿಂಗ್ ಹಾಗೂ ಕ್ವಾಲಿಟಿಗೆ ದುನಿಯಾ ಸೂರಿ ಫಿದಾ ಆಗಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿರುವ ಅವರು ''ಕೆಜಿಎಫ್ ಸಿನಿಮಾವನ್ನು ತುಂಬಾ ದೊಡ್ಡಮಟ್ಟದಲ್ಲಿ ಮಾಡುತ್ತಿದ್ದಾರೆ. ಈ ರೀತಿಯ ಸಿನಿಮಾಗಳು ಕನ್ನಡ ಚಿತ್ರಕ್ಕೆ ಅಗತ್ಯವಿದೆ. ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ದೊಡ್ಡದು ಮಾಡಬೇಕಿದೆ. 'ಕೆಜಿಎಫ್' ರೂಪುಗೊಳ್ಳುತ್ತಿರುವ ರೀತಿ ಇಷ್ಟ ಆಯ್ತು. ಈ ರೀತಿಯ ಸಿನಿಮಾಗಳನ್ನು ಮಾಡಬೇಕು.'' ಎಂದು ಹೇಳಿದ್ದಾರೆ. ಅಂದಹಾಗೆ, 'ಕೆಜಿಎಫ್' ಕನ್ನಡದ ಬಹುಕೋಟಿ ವೆಚ್ಚದ ಸಿನಿಮಾವಾಗಿದೆ.

source: 60SecondsNow

Comments