Skip to main content


ಪುನೀತ್, ತರುಣ್ ಇವರಿಬ್ಬರೂ ತಂದೆಗೆ ತಕ್ಕ ಮಕ್ಕಳು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗಾಗಲೇ ಕೋಟ್ಯಾಂತರ ಅಭಿಮಾನಿಗಳಿಂದ ತಂದೆಗೆ ತಕ್ಕಮಗ ಎಂದು ಕರೆಸಿಕೊಂಡಿದ್ದಾರೆ. ಈಗ ನಟ ತರುಣ್ ಸುಧೀರ್ ಕೂಡ ತಂದೆಗೆ ತಕ್ಕ ಮಗ ಎನ್ನಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ತಂದೆಗೆ ತಕ್ಕ ಮಕ್ಕಳಾದ ಇವರಿಬ್ಬರು ಒಟ್ಟಿಗೆ ಫಿಲ್ಮ್ ಫೇರ್ ಅವಾರ್ಡ್ ಪಡೆದು ಕೊಂಡಿದ್ದಾರೆ.

'ಚೌಕ' ಸಿನಿಮಾ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಯನ್ನು ತರುಣ್ ಸುಧೀರ್ ಪಡೆದುಕೊಂಡಿದ್ದರೆ ನಟ ಪುನೀತ್ ರಾಜ್ ಕುಮಾರ್ 'ರಾಜಕುಮಾರ' ಸಿನಿಮಾದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇಬ್ಬರು ಪ್ರಶಸ್ತಿ ಪಡೆದುಕೊಂಡ ನಂತರ ಒಟ್ಟಿಗೆ ಫೋಟೋಗೆ ಪೋಸ್ ಕೊಟ್ಟಿದ್ದರು.

ಪುನೀತ್ ಹಾಗೂ ತರುಣ್ ಪ್ರಶಸ್ತಿ ಹಿಡಿದು ತೆಗೆಸಿಕೊಂಡ ಫೋಟೋವನ್ನು ಹಾಗೂ ಸುಧೀರ್ ಮತ್ತು ಡಾ ರಾಜ್ ಕುಮಾರ್ ಒಟ್ಟಿಗಿರುವ ಫೋಟೋವನ್ನು ತರಣ್ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದಾರೆ. ಅದರ ಜೊತೆಯಲ್ಲಿ "ನಾನು ತಿಳಿದಿರುವ ಅತ್ಯಂತ ವಿನಮ್ರ ವ್ಯಕ್ತಿ ಅಪ್ಪು ಸರ್. ಅಪ್ಪಾಜಿ ಮತ್ತು ಅಪ್ಪ ದೊಡ್ಡ ಬಂಧವನ್ನು ಹಂಚಿಕೊಂಡಿದ್ದರು ಈಗ ಅದೇ ಪರಂಪರೆಯು ಮುಂದುವರಿದಿದೆ" ಎಂದು ಬರೆದುಕೊಂಡಿದ್ದಾರೆ.       

short by Pawan / more at Filmibeat

Comments