Skip to main content


ಅಂತಾರಾಷ್ಟ್ರೀಯ ಯೋಗದಿನ: ಪ್ರಧಾನಿ ಮೋದಿ ಭಾಷಣದ ಮುಖ್ಯಾಂಶ

ಜಗತ್ತನ್ನು ಒಂದುಗೂಡಿಸುವ ಒಂದು ಅತ್ಯುತ್ತಮ ಸಾಧನವಾಗಿ ಯೋಗ ಮಹತ್ವ ಪಡೆದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಉತ್ತರಾಖಂಡ್ ನ ಡೆಹ್ರಾಡೂನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ನಿಮಿತ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ನೆರೆದಿದ್ದ 55 ಸಾವಿರಕ್ಕೂ ಹೆಚ್ಚು ಯೋಗಾಸಕ್ತರಿಗೆ, ಯೋಗದ ಮಹತ್ವ ತಿಳಿಸಿದರು.ಯೋಗಾಸನ ಮಾಡುವುದರೊಂದಿಗೆ ಮೋದಿ ವಿಶ್ವ ಯೋಗ ದಿನ ಆಚರಿಸಿದರು.

"ಇಂದಿನ ವೇಗದ ಯುಗದಲ್ಲಿ ಒಬ್ಬ ವ್ಯಕ್ತಿಯ ದೇಹ, ಮನಸ್ಸು ಮತ್ತು ಆತ್ಮವನ್ನು ಬೆಸೆಯಲು ಯೋಗ ಮಹತ್ವದ ಪಾತ್ರ ವಹಿಸಿದೆ. ಇದು ಶಾಂತಿಯತ್ತ ಮನುಷ್ಯನನ್ನು ಕೊಂಡೊಯ್ಯುವ ಮಾರ್ಗವಾಗಿದೆ" ಎಂದರು. ಡೆಹ್ರಾಡೂನ್ ನಿಂದ ಡಬ್ಲಿನ್, ಶಾಂಗೈಯಿಂದ ಚಿಕಾಗೋ, ಜಕಾರ್ತಾದಿಂದ ಜೊಹಾನ್ಸ್ ಬರ್ಗ್ ವರೆಗೂ ಎಲ್ಲೆಲ್ಲೂ ಯೋಗ ಅಸ್ತಿತ್ವದಲ್ಲಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.    

short by Pawan / more at Oneindia

Comments