Skip to main content


ಶಿವಣ್ಣ, ಯಶ್, ಪತ್ನಿ ಪ್ರಿಯಾ ಸೇರಿದಂತೆ ಹಲವರಿಗೆ ಚಾಲೆಂಜ್ ಹಾಕಿದ ಕಿಚ್ಚ..?!

ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಕರೆ ಕೊಟ್ಟಿರುವ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಅಭಿಯಾನ ಸದ್ಯ ಎಲ್ಲೆಡೆ ಸೆನ್ಸೇಷನ್​ ಸೃಷ್ಟಿಸಿದೆ. ಈಗಾಗಲೇ ಕ್ರಿಕೆಟಿಗ ವಿರಾಟ್​ ಕೊಹ್ಲಿ, ಅನುಷ್ಕಾ ಶರ್ಮಾ, ಸಂಸದ ಕಿರಣ್​ ರಿಜು, ನಟ ಹೃತಿಕ್​ ರೋಷನ್​ ಸೇರಿ ಸಾಕಷ್ಟು ಜನರು ಚಾಲೆಂಜ್​ ಸ್ವೀಕಾರ ಮಾಡಿ ತಮ್ಮ ಫಿಟ್​ನೆಸ್​ ವಿಡಿಯೋ ಅಪ್ಲೋಡ್​​ ಮಾಡಿದ್ದಾರೆ. ಈಗ ಕಿಚ್ಚನ ಸರದಿ. ಕ್ರಿಕೆಟರ್ ಕನ್ನಡಿಗ ವಿನಯ್ ಕುಮಾರ್ ಹಾಕಿದ 'ಹಮ್ ಫಿಟ್ ತೋ ಇಂಡಿಯಾ ಫಿಟ್' ‌ ಚಾಲೆಂಜ್ ಸ್ವೀಕರಿಸಿರುವ ಕಿಚ್ಚ ಟ್ವಿಟರ್​ನಲ್ಲಿ ತಾವು ವರ್ಕೌಟ್ ಮಾಡುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡುವ ಮೂಲಕ ವಿನಯ್ ಕುಮಾರ್ ಚಾಲೆಂಜ್ ಗೆ ಸ್ಪಂದಿಸಿರುವುದಲ್ಲದೆ, ಜೊತೆಗೆ ಪತ್ನಿ ಪ್ರಿಯಾ , ಶಿವಣ್ಣ , ಯಶ್ , ಬಾಲಿವುಡ್ ನಟ ಸೊಹೈಲ್ ಖಾನ್, ರಿತೇಶ್ ದೇಶಮುಖ್ ಗೆ 'ಹಮ್ ಫಿಟ್ ತೋ ಇಂಡಿಯಾ ಫಿಟ್' ಚಾಲೆಂಜ್ ಹಾಕಿದ್ದಾರೆ, ಕಪ್ಪು ಸ್ಪೋರ್ಟ್ಸ್ ಪ್ಯಾಂಟ್, ಟೀ ಶರ್ಟ್ ಧರಿಸಿ ವರ್ಕೌಟ್ ಮಾಡಿರುವ ಕಿಚ್ಚ, ಸ್ಟಾರ್ ನಟರಿಗೆ ಚಾಲೆಂಜ್ ಎಸೆದಿದ್ದಾರೆ.          

short by Pawan!

Comments