Skip to main content


ಐ ಲವ್ ಯೂ ನಂತರ ಉಪೇಂದ್ರ ಅವರ 50ನೇ ಚಿತ್ರ ಅಧೀರ!

ಐ ಲವ್ ಯೂ ಚಿತ್ರ ಉಪೇಂದ್ರ ಅವರ 49ನೇ ಚಿತ್ರವಾಗಿದ್ದು ಉಪೇಂದ್ರ ಅವರ 50ನೇ ಚಿತ್ರ ಯಾವುದಾಗಲಿದೆ ಎಂಬ ಕುತೂಹಲ ಮೂಡಿತ್ತು. ಇದೀಗ ಆ ಕುತೂಹಲಕ್ಕೆ ತೆರೆಬಿದ್ದಿದ್ದು ಓಂ ಸಾಯಿ ಪ್ರಕಾಶ್ ಅವರ ಹತ್ತಿರ ಸಹಾಯಕ ನಿರ್ದೇಶಕರಾಗಿದ್ದ ಸಂತೋಷ್ ತಮ್ಮ ಮೊದಲ ಚಿತ್ರದಲ್ಲೇ ಉಪೇಂದ್ರಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಚಿತ್ರಕ್ಕೆ ಅಧೀರ ಎಂದು ಶೀರ್ಷಿಕೆ ಇಡಲಾಗಿದೆ. ಕನಕಪುರ ಶ್ರೀನಿವಾಸ್ ನಿರ್ಮಾಣ ಮಾಡುತ್ತಿರುವ ಅಧೀರ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರೆಡಿಯಾಗಲಿದೆ. ಅಧೀರ ಐತಿಹಾಸಿಕ ಕಥೆಯಾದರಿಸಿದ ಚಿತ್ರವಾಗಿದ್ದು ಕಮರ್ಷಿಯಲ್ ಮತ್ತು ಸ್ಪಸ್ಪೆನ್ಸ್ ಅಂಶಗಳನ್ನು ಹೊಂದಿದೆ.     

short by Pawan / more at Kannada Prabha

Comments