Skip to main content


ಸ್ಯಾಂಡಲ್ ವುಡ್ ಗೆ ರಚಿತಾ ರಾಮ್: 5 ವರ್ಷದ ನಂತರವೂ ನಂಬರ್ ಒನ್ ಸ್ಥಾನದಲ್ಲಿ ಗುಳಿಕೆನ್ನೆ ಬೆಡಗಿ

2013ರಲ್ಲಿ ರಚಿತಾರಾಮ್ ಕಿರುತೆರೆಯಲ್ಲಿ ಚಿರ ಪರಿಚಿತರಾಗಿದ್ದರು. ದಿನಕರ್ ತೂಗುದೀಪ ಕಣ್ಣಿಗೆ ಬಿದ್ದ ಮೇಲೆ ಆಕೆಯ ಅದೃಷ್ಟವೇ ಬದಲಾಗಿ ಹೋಯಿತು.  ದರ್ಶನ್ ನಟೆನೆಯ ಬುಲ್-ಬುಲ್ ಮೂಲಕ ಕನ್ನಡ ಸಿನಿಮಾಗೆ ರಚಿತಾ ರಾಮ್ ಪಾದರ್ಪಣೆ ಮಾಡಿದರು. 5 ವರ್ಷದಲ್ಲಿ 9 ಸಿನಿಮಾಗಳಲ್ಲಿ ನಟಸಿರುವ ರಚಿತಾ ರಾಮ್ ಸ್ಯಾಂಡಲ್ ವುಡ್ ನಲ್ಲಿ ಟಾಪ್ ಒನ್ ನಟಿಯಾಗಿದ್ದಾರೆ, ಯಾವುದೇ ಅಡೆತಡೆಯಿಲ್ಲದೇ ರಚಿತಾ ರಾಮ್  5 ವರ್ಷ ಪೂರೈಸಿದ್ದಾರೆ. 5 ವರ್ಷದಲ್ಲಿ ಒಂದರ ಹಿಂದೆ ಒಂದು ಸಿನಿಮಾದಲ್ಲಿ ನಟಿಸಿದರು. ಜೊತೆಗೆ ಸ್ಯಾಂಡಲ್ ವುಡ್ ಪ್ರಮುಖ ಸ್ಟಾರ್ ಗಳಾದ ದರ್ಶನ್, ಸುದೀಪ್, ಪುನೀತ್,  ಶ್ರೀಮುರುಳಿ, ಗಣೇಶ್, ಧ್ರುವ ಸರ್ಜಾ, ರಮೇಶ್ ಅರವಿಂದ್ ಸೇರಿದಂತೆ ಹಲವು ನಟರ ಜೊತೆ ಅಭಿನಯಿಸಿದ್ದಾರೆ.     

short by Pawan / more at Kannada Prabha