Skip to main content


'ಕಿನಾರೆ' ಚಿತ್ರದ 5ನೇ ಹಾಡನ್ನು ಬಿಡುಗಡೆ ಮಾಡಿದ್ದು ಈ 'ಸೂಪರ್ ಸ್ಟಾರ್'

ದೇವರಾಜ್ ಪೂಜಾರಿ ಅವರು ನಿರ್ದೇಶಿಸಿ, ನಿರ್ಮಿಸುತ್ತಿರುವ ಚಿತ್ರ “ಕಿನಾರೆ”. ಇದೊಂದು ಪ್ರೇಮ ಹಾಗು ಸಂಗೀತಮಯವಾದ ಪ್ರಯತ್ನ. ಸುರೇಂದ್ರ ನಾಥ್ ಸಾಗರ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.ಇದು ಕೇವಲ ಹಾಡುಗಳ ಬಿಡುಗಡೆ ಮತ್ತು ಇತರ ಸಂಗತಿಗಳಿಂದಲೇ ಬಲು ನಿರೀಕ್ಷಿತ ಚಲನಚಿತ್ರವಾಗಿದೆ.

ಸತೀಷ್ ರಾಜ್ ಮತ್ತು ಗೌತಮಿ ಜಾಧವ್ ಅವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದು; ದತ್ತಾತ್ರೇಯ, ಪ್ರಮೋದ್ ಶೆಟ್ಟಿ, ಕುರಿ ಪ್ರತಾಪ್, ವೀಣಾ ಸುಂದರ್ ಈ ಚಿತ್ರದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಇಲ್ಲಿಯವರೆಗೂ 4 ಹಾಡುಗಳನ್ನು ಬಿಡುಗಡೆ ಮಾಡಲಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ಚಪ್ಪಾಳೆ ಗಿಟ್ಟಿಸಿಕೊಂಡಿದೆ. ಈ 4 ಗೀತೆಗಳು ಭಾರಿ ಯಶಸ್ಸನ್ನು ಮತ್ತು ಜನರಿಂದ ಉತ್ತಮ ಉತ್ತೇಜನ ಮತ್ತು ಬೆಂಬಲವನ್ನು ಕಂಡಿದೆ.

ಕಿನಾರೆ ಪರದೆಯ ಮೇಲೆ ಭಾವನಾತ್ಮಕ ಕಾವ್ಯದ ಚಿತ್ರಣವಾಗಿದೆ, ಇದು ಕರಾವಳಿ ಪ್ರದೇಶದಲ್ಲಿ ಸ್ಥಾಪಿಸಿರುವ ಒಂದು ದೊಡ್ಡ ಸಾಮಾಜಿಕ ಕ್ಯಾನ್ವಾಸ್ನಲ್ಲಿ ನಡೆಯುವ ಒಂದು ಮುಗ್ಧ ಪ್ರೀತಿಯ ಕಥೆಯಾಗಿದೆ. ಒಟ್ಟಾರೆಯಾಗಿ, ಇದು ಮತ್ತೊಂದು ಪ್ರಾಯೋಗಿಕ ಚಿತ್ರವಾಗಿದ್ದು ಎಲ್ಲ ಅಂಶಗಳಲ್ಲೂ ಹೊಸತಾಗಿದೆ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು,  ಬರಹಗಾರರಾದ ಜಯಂತ್ ಕಾಯ್ಕಿನಿ ಮತ್ತು ಗಾಯಕ ಸೋನು ನಿಗಮ್ ಸಂಯೋಜನೆಯಲ್ಲಿ ಬಂದ ಅದ್ಭುತ ಹಾಡು "ಇರುವೆಯ ಇರುವೆಯ ಸನಿಹವೇ ನೀನು" ಬಿಡುಗಡೆಯಾದ ನಂತರ; "ಹಲೋ! ಹವ್ ಆರ್ ಯೂ? " ಹಾಡನ್ನು ಯೋಗರಾಜ್ ಭಟ್ ಬರೆದು ವಿಜಯ್ ಪ್ರಕಾಶ್ ಹಾಡಿ ಚಿತ್ರನಟ ಧನಂಜಯ(ಡಾಲಿ) ಬಿಡುಗಡೆ ಮಾಡಿದ್ದರು,; ಈಗ ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೊಂದು" ರತ್ನವನ್ನು” ಬಿಡುಗಡೆ ಮಾಡುವ ಸಮಯ ಬಂದಿದೆ. "ರಾಣಿ ಯುವರಾಣಿ ಕೇಳೆನ್ನಾ ಹಾಡನು” ಹಾಡನ್ನು ವಿ.ನಾಗೇಂದ್ರ ಪ್ರಸಾದ್ ಬರೆದು ಟಿಪ್ಪು ಮತ್ತು ಶ್ವೇತಾ ಪ್ರಭು ಅವರು ಹಾಡಿದ್ದಾರೆ. ಈ ಹಾಡು ಜುಲೈ 4 ರಂದು 10:00 AM ಘಂಟೆಗೆ ಬಿಡುಗಡೆಯಾಯಿತು.

ಈ ಅದ್ಭುತ ಹಾಡು ನಮಗೆ ಹೆಚ್ಚು ನಿರೀಕ್ಷೆ ಹಾಗು ಕುತೂಹಲವನ್ನು ತಂದಿದೆ. ಈಗ ನಮಗೆ ಯಾವುದೇ ಆಯ್ಕೆಗಳಿಲ್ಲ, ಚಲನಚಿತ್ರವು ಪ್ರದರ್ಶನಗೊಳ್ಳುವವರೆಗೆ ಕಾಯಬೇಕಾಗಿದೆ.

ಸಂಪೂರ್ಣ “ಕಿನಾರೆ” ತಂಡಕ್ಕೆ ಒಳ್ಳೆಯದಾಗಲಿ, ನೂರು, ಇನ್ನೂರು ದಿನಗಳ ಪ್ರದರ್ಶನ ಕಾಣಲಿ ಎಂದು ಹಾರೈಸೋಣ.

* ಸಿದ್ಧಾರ್ಥ್