Skip to main content


ಸಿನೆಮಾ ವಿಮರ್ಶೆ: 6ನೇ ಮೈಲಿ | ಫಿಲ್ಮಿಬೀ ರೇಟಿಂಗ್ - 3.5/5

ಚಿತ್ರ - 6ನೇ ಮೈಲಿ

ತಾರಾಗಣ - ಸಂಚಾರಿ ವಿಜಯ್, ಆರ್.ಜೆ.ನೇತ್ರಾ, ಆರ್.ಜೆ.ಸುದೇಶ್ ಮತ್ತು ಇನ್ನಿತರರು.

ನಿರ್ದೇಶಕರು - ಸೀನಿ

ನಿರ್ಮಾಪಕರು - ಡಾ. ಶೈಲೇಶ್ ಕುಮಾರ್

ರೇಟಿಂಗ್ - 3.5/5

ಡಾ. ಶೈಲೇಶ್ ಕುಮಾರ್ ಅವರು ಚಿತ್ರಕ್ಕೆ ಯಾವುದೇ ಕೊರತೆ ಕಾಡದಂತೆ ಚಿತ್ರವನ್ನ ಅದ್ಭುತವಾಗಿ ನಿರ್ಮಾಣ ಮಾಡಿದ್ದಾರೆ,

ಸೀನಿ ಅವರು ಚೊಚ್ಚಲ ನಿರ್ದೇಶನದಲ್ಲೇ ಒಬ್ಬ ಅದ್ಭುತ ನಿರ್ದೇಶಕನಾಗುವರೆಂದು ಸಿನಿಪ್ರಿಯರಲ್ಲಿ ಭರವಸ ಮೂಡಿಸಿದ್ದಾರೆ.

ಸೀನಿ ಅವರ ಚೊಚ್ಚಲ ನಿರ್ದೇಶನದ "6ನೇ ಮೈಲಿ" ಚಿತ್ರ ಸಂಪೂರ್ಣ ಥ್ರಿಲ್ಲಿಂಗ್ ಅಂಶಗಳನ್ನ ಒಳಗೊಂಡಿದೆ. ಮೊದಲ ಅರ್ಧ ಹಲವಾರು ತಿರುವುಗಳೊಟ್ಟಿಗೆ ಸಾಗುವ ಕಥೆಯಲ್ಲಿ ಚಿತ್ರದ ನಾಯಕ ಯಾರು ಎಂಬುವುದು ನಿಜಕ್ಕೂ ನೋಡುಗರ ತಲೆಗೆ ಹುಳ ಬಿಡುವಂತಿರುತ್ತದೆ.

ನಟ ಸಂಚಾರಿ ವಿಜಯ್ ಅವರ ಚಿತ್ರಗಳೆಂದರೆ ಅದರಲ್ಲಿ ಖಂಡಿತ ಒಂದು ವಿಶೇಷತೆ ಇದ್ದೆ ಇರುತ್ತದೆ. ಒಂದೊಂದು ಚಿತ್ರಗಳಲ್ಲೂ ವಿಭಿನ್ನತೆಯ ಪಾತ್ರಗಳಲ್ಲಿ ನಟಿಸುವ ಅವರು, ಮತ್ತೊಂದು ಸಿಹಿಯನ್ನು ಜನರಿಗೆ ಉಣಬಡಿಸಿದ್ದಾರೆ. 

ಚಿತ್ರದಲ್ಲಿ 6 ನೇ ಮೈಲಿ ಎಂದರೇನು? ಸಂಚಾರಿ ವಿಜಯ್ ಅವರ ಪಾತ್ರವೇನು? ಈ ಕಥೆಯ ಸಾರಾಂಶ ಮತ್ತು ಉದ್ದೇಶವೇನು? ಚಿತ್ರದ ಕೊನೆಗೆ ಏನಾಗುತ್ತದೆ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪಡೆಯಲು ನೀವೊಮ್ಮೆ ಚಿತ್ರವನ್ನು ನೋಡಲೇಬೇಕು.

"6ನೇ ಮೈಲಿ" ಹೆಸರು ಕೇಳಿದಾಕ್ಷಣ ಇದು ಸ್ವಲ್ಪ ವಿಶೇಷವಾದ ಹಾಗು ವಿಚಿತ್ರವಾದ ಸಿನಿಮಾ ಎಂದು ಎಲ್ಲರಿಗೂ ತಿಳಿಯುತ್ತದೆ. ಟೈಟಲ್, ಚಿತ್ರದ ಪೋಸ್ಟರ್ ಗಳು, ನಂತರ ಟ್ರೈಲರ್, ಹಾಡುಗಳು ಎಲ್ಲವೂ ಹಲವಾರು ವಿಶೇಷತೆಗಳಿಂದ ಕೂಡಿದ್ದವು. ಇದರಿಂದ ಚಿತ್ರದ ಮೇಲೆ ಪ್ರೇಕ್ಷಕರಿಗೆ ಅಪಾರವಾದ ನಿರೀಕ್ಷೆ ಹುಟ್ಟಿತು.

ಮೊದಲ ಅರ್ಧ, ಚಿತ್ರದ ಕಥೆಗೆ ನಿಜವಾದ ನ್ಯಾಯ ಒದಗಿಸಿ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಚಿತ್ರದ ಎರಡನೇ ಅರ್ಧದಲ್ಲಿ ಮೊದಲಾರ್ಧಕ್ಕಿಂತ ವೇಗವಾಗಿ ಮತ್ತು ಅಷ್ಟೇ ಥ್ರಿಲ್ಲಿಂಗ್ ಆಗಿ ಸಾಗುವ ಕಥೆಯಾಗಿದೆ. ಇಲ್ಲಿ ನೋಡುಗರು ಕಣ್ಣು ಮಿಟುಕಿಸದೆ ನೋಡುವಂತಿದೆ.

ಚಿತ್ರದ ಕಥೆ ನಕ್ಸಲರ ಸುತ್ತ ಸಾಗಿದ್ದು, ನಿಜಕ್ಕೂ ಅವರ ಉದ್ದೇಶವೇನು, ಅವರ ದ್ಯೇಯವೇನು, ಅವರ ಹೋರಾಟವೇನು, ಇದೆಲ್ಲವನ್ನು ಅದ್ಭುತವಾಗಿ ನಿರ್ದೇಶಕ ಸೀನಿ ಅವರು ಚಿತ್ರಿಸಿದ್ದಾರೆ. ಇದೆಲ್ಲಾ ಅಂಶಗಳು ಮೊದಲಿನಿಂದ ಕೊನೆಯ ತನಕ ಥ್ರಿಲ್ಲಿಂಗ್ ಆಗಿಯೇ ಸಾಗುತ್ತದೆ.

ಚಿತ್ರದ ಅತೀ ದೊಡ್ಡ ಪ್ಲಸ್ ಪಾಯಿಂಟ್ ಎಂದರೆ ಅದು ಸಾಯಿ ಕಿರಣ್ ಅವರ ಹಿನ್ನಲೆ ಸಂಗೀತ ಮತ್ತು ಹಾಡುಗಳು. ಅದರಿಂದ ಪ್ರತಿ ಕ್ಷಣ ರೋಮಾಂಚನ ಉಂಟು ಮಾಡುತ್ತದೆ. ಹೌದು, ಇಡೀ ಚಿತ್ರ ಥ್ರಿಲ್ಲಿಂಗ್ ಆಗಿ ಮೂಡಿಬರುವಲ್ಲಿ ಪ್ರಮುಖ ಪಾತ್ರ ಇವರದೇ.

ಇನ್ನು ನಟನೆಯಲ್ಲಿ ಸಂಚಾರಿ ವಿಜಯ್ ಅವರ ಬಗ್ಗೆ ಹೇಳುವುದೇ ಬೇಡ. ರಾಷ್ಟ್ರ ಪ್ರಶಸ್ತಿ ವಿಜೇತ ನಟರಾದ ಇವರು ಅಮೋಘವಾಗಿ ನಟಿಸಿದ್ದಾರೆ.

ಆರ್.ಜೆ.ನೇತ್ರಾ, ಆರ್.ಜೆ.ಸುದೇಶ್ ಹಾಗೂ ಇನ್ನುಳಿದ ಎಲ್ಲಾ ಕಲಾವಿದರು ಕೊಟ್ಟ ಪಾತ್ರಗಳಿಗೆ ನ್ಯಾಯ ದೊರಕಿಸಿದ್ದಾರೆ.

ಒಟ್ಟಾರೆ ಹೇಳಬೇಕೆಂದರೆ "6ನೇ ಮೈಲಿ" ಚಿತ್ರ ಮೊದಲಿನಿಂದ ಕೊನೆಯ ತನಕ ಯಾವುದೇ ಬೇಜಾರು ಮಾಡದೆ, ಕೊಟ್ಟ ಹಣಕ್ಕೆ, ಇಟ್ಟ ನಂಬಿಕೆಗೆ ಹಾಗು ಕಳೆದ ಸಮಯಕ್ಕೆ ನ್ಯಾಯ ಒದಗಿಸಿ, ಭರಪೂರಜನೆ ನೀಡುವ ಥ್ರಿಲ್ಲರ್ ಚಿತ್ರ! ಮಿಸ್ ಮಾಡದೆ ಹತ್ತಿರದ ಚಿತ್ರ ಮಂದಿರದಲ್ಲಿಯೇ ನೋಡಿ, ಆನಂದಿಸಿ!

Comments