Skip to main content


ಬಿಗ್ ಬಾಸ್ ಕನ್ನಡ-6 ಕಾರ್ಯಕ್ರಮದಲ್ಲಿ ಇವರೆಲ್ಲ ಸ್ಪರ್ಧಿಗಳಂತೆ.! ಹೌದೇನು.?

'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮ ಮುಗಿದು ನಾಲ್ಕೈದು ತಿಂಗಳು ಉರುಳಿವೆ ಅಷ್ಟೇ. ಕನ್ನಡ Rapper ಚಂದನ್ ಶೆಟ್ಟಿ 'ಬಿಗ್ ಬಾಸ್' ಟ್ರೋಫಿಗೆ ಮುತ್ತಿಟ್ಟು ಬೇರೆ ಬೇರೆ ರಿಯಾಲಿಟಿ ಶೋಗಳಲ್ಲೇ ಇನ್ನೂ ಬಿಜಿಯಾಗಿದ್ದಾರೆ. ಹೀಗಿರುವಾಗಲೇ, ಕಲರ್ಸ್ ಸೂಪರ್ ವಾಹಿನಿಯಲ್ಲಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೋಮೋ ಪ್ರಸಾರ ಆಗುತ್ತಿದೆ.

ಈಗಾಗಲೇ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಪ್ರೀ-ಪ್ರೊಡಕ್ಷನ್ ವರ್ಕ್ ಗೆ ಚಾಲನೆ ಕೊಡಲಾಗಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ 'ಬಿಗ್ ಬಾಸ್ ಕನ್ನಡ-6'ನಲ್ಲಿನ ಸ್ಪರ್ಧಿಗಳ 'ಸಂಭಾವ್ಯ ಪಟ್ಟಿ' ಹರಿದಾಡುತ್ತಿದೆ. ಹಾಗ್ನೋಡಿದ್ರೆ, ಕಲರ್ಸ್ ವಾಹಿನಿಯವರೇ ಇನ್ನೂ ಸ್ಪರ್ಧಿಗಳ ಹುಡುಕಾಟ ಶುರು ಮಾಡಿದ್ದಾರೋ, ಇಲ್ವೋ... ಆದ್ರೆ, ಸೋಷಿಯಲ್ ಮೀಡಿಯಾದಲ್ಲಿ ಮಾತ್ರ 'ಸಂಭಾವ್ಯ ಪಟ್ಟಿ'ಗಳ ಸುದ್ದಿ ಜೋರಾಗಿದೆ.    

short by Pawan / more at Filmibeat

Comments