Skip to main content


ಭರಾಟೆಯಿಂದ ಬಂತು ಭರ್ಜರಿ ಸುದ್ದಿ: 9 ಕೇಡಿಗಳ ವಿರುದ್ಧ ಸಿಡಿದು ನಿಲ್ತಾರೆ ಶ್ರೀಮುರಳಿ.!

ಈಗಾಗಲೇ 'ಭರಾಟೆ' ಸಿನಿಮಾದ ಫೋಟೋಶೂಟ್ ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆದಿದೆ. ಫೋಟೋಶೂಟ್ ಗಾಗಿಯೇ ಲೊಕೇಶನ್ ಹುಡುಕಿ ರಾಜಸ್ಥಾನದವರೆಗೂ ಪ್ರಯಾಣ ಮಾಡಿರುವ ಈ ತಂಡ, ಇಡೀ ಚಿತ್ರವನ್ನೂ ಗ್ರ್ಯಾಂಡ್ ಆಗಿ ತೆರೆಮೇಲೆ ಮೇಲೆ ತರಲು ಸಜ್ಜಾಗುತ್ತಿದೆ. 'ಭರಾಟೆ' ಸಿನಿಮಾದಲ್ಲಿ ಒಂದಲ್ಲ, ಎರಡಲ್ಲ... ಬರೋಬ್ಬರಿ 9 ನೆಗೆಟಿವ್ ಕ್ಯಾರೆಕ್ಟರ್ ಗಳು ಇರಲಿವೆ. 9 ಜನ ನಡೆಸುವ ಮಸಲತ್ತಿನ ವಿರುದ್ಧ ಸಿಡಿದು ನಿಲ್ಲಲ್ಲಿದ್ದಾರೆ ರೋರಿಂಗ್ ಸ್ಟಾರ್ ಶ್ರೀಮುರಳಿ. ಬಾಲಿವುಡ್ ನಲ್ಲಿ ಹೆಸರು ಮಾಡಿರುವ ಸೋನು ಸೂದ್, ಟಾಲಿವುಡ್ ನ ಖ್ಯಾತ ನಟರಾದ ಜಗಪತಿ ಬಾಬು, ಸುಮನ್ ಸೇರಿದಂತೆ ಪ್ರಖ್ಯಾತ ವಿಲನ್ ಪಾತ್ರಧಾರಿಗಳೇ 'ಭರಾಟೆ' ಚಿತ್ರದ 9 ನೆಗೆಟಿವ್ ಕ್ಯಾರೆಕ್ಟರ್ ಗಳಿಗೆ ಬಣ್ಣ ಹಚ್ಚಲಿದ್ದಾರಂತೆ.   

short by Pawan / more at Filmibeat

Comments