Skip to main content


ವಿಷ್ಣು ಬಳಸಿದ ಮೊದಲ ಕಾರ್ ಬಗ್ಗೆ ಇರೋ ಕುತೂಹಲಕರ ಸಂಗತಿ


ಡಾ ವಿಷ್ಣುವರ್ಧನ್ ಬಳಸಿದ ಮೊದಲ ಕಾರ್ ಇಂದಿಗೂ ನಮ್ಮೆಲ್ಲರ ಮಧ್ಯೆ ಇದೆ. ಹೌದು ಧರ್ಮಸ್ಥಳದಲ್ಲಿರುವ ಮ್ಯೂಸಿಯಂ ನಲ್ಲಿ ವಿಷ್ಣು ಕಾರ್ ಪ್ರದರ್ಶನಕ್ಕೆ ಇಡಲಾಗಿದೆ. ಡಾ ವೀರೇಂದ್ರ ಹೆಗಡೆ ಅವರು ಧರ್ಮಸ್ಥಳದಲ್ಲಿ ಮ್ಯೂಸಿಯಂ ಆರಂಭ ಮಾಡಿದಾಗ ವಿಷ್ಣುವರ್ಧನ್ ಅವರನ್ನು ಭೇಟಿ ಮಾಡಿ ವಸ್ತು ಸಂಗ್ರಹಾಲಯಕ್ಕೆ ನಿಮ್ಮ ಕಡೆಯಿಂದ ಏನನ್ನಾದರೂ ನೀಡಿ ಎಂದಿದ್ದರಂತೆ. ಆಗ ವಿಷ್ಣು ಪ್ರೀತಿಯಿಂದ ನಾ ಬಳಸಿದ ಮೊದಲ ಕಾರ್ ಅನ್ನೇ ತೆಗೆದುಕೊಂಡು ಹೋಗಿ ಎಂದಿದ್ದಾರೆ. ವಿಷ್ಣುವರ್ಧನ್ ಬಳಸಿದ್ದ ಡಾಟ್ಸ್ ನ್ ಕಾರ್ ಅನ್ನು ಇಂದಿಗೂ ಕೂಡ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ. ಕೆ ಎ 04 ಎಂ 707 ನಂಬರ್ ನ ಡಾಟ್ಸ್ ನ್ ಅನ್ನು ಧರ್ಮಸ್ಥಳ ಮ್ಯೂಸಿಯಂ ನ ಮುಖ್ಯ ಆಕರ್ಷಣೆ ಆಗಿದೆ.   

short by Pawan / more at Filmibeat

Comments