Skip to main content


ಪುನೀತ್ ಅಭಿನಯದ ನಟ ಸಾರ್ವಭೌಮ ಚಿತ್ರೀಕರಣಕ್ಕೆ ಅಡ್ಡಿ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಹಾಕೂಟದಲ್ಲಿನ ಪುಷ್ಕರಣಿಯಲ್ಲಿ ಡಿಗ್ಗಿಂಗ್ ಮಾಡಿ ತಗ್ಗು ತೋಡಿ ಸೆಟ್ ಹಾಕಲಾಗಿದೆ. ಇದರಿಂದ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ವಿರೋಧ ವ್ಯಕ್ತವಾಗಿದೆ. ಉತ್ತರ ಕರ್ನಾಟಕದಲ್ಲಿ ದಕ್ಷಿಣ ಕಾಶಿ ಎಂದು ಪ್ರಸಿದ್ಧಿ ಪಡೆದಿರುವ ಮಹಾಕೂಟದ ಹೊಂಡದಲ್ಲಿ ಎಂದೂ ಬತ್ತದ ಅಂತರ್ಜಲ ಇರುತ್ತದೆ. ಹೊಂಡದಲ್ಲಿನ ಅಂತರ್ಜಲಕ್ಕೆ ಧಕ್ಕೆಯಾಗುತ್ತದೆಂದು ಆತಂಕ ವ್ಯಕ್ತಪಡಿಸಿರುವ ಭಕ್ತರು, ಚಿತ್ರೀಕರಣಕ್ಕೆ ನಿಷೇಧ ಹೇರುವಂತೆ ಆಗ್ರಹಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಪವನ್ ಒಡೆಯರ್, ಬಾದಾಮಿ ತಾಲೂಕಿನ ಮಹಾಕೂಟದ ಪುಷ್ಕರಣೆಗೆ ಯಾವುದೇ ಹಾನಿ ಮಾಡಿಲ್ಲ. ಪುಷ್ಕರಣೆ ಶುಚಿಗೊಳಿಸಿ ಸೆಟ್ ಹಾಕಲಾಗಿದೆ. ಈ ಬಗ್ಗೆ ಆತಂಕ ಬೇಡ. ನಮಗೂ ಐತಿಹಾಸಿಕ ತಾಣಗಳ ಬಗ್ಗೆ ಕಾಳಜಿಯಿದೆ. ಇಲ್ಲಿನ ತಾಣಗಳನ್ನು ವಿಭಿನ್ನವಾಗಿ ಚಿತ್ರದ ಮೂಲಕ ತೋರಿಸೋದು ನಮ್ಮ ಪ್ರಯತ್ನ. ಈ ಭಾಗದ ಜನರು ನಮಗೆ ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ.       

short by Pawan / more at Vijayakarnataka

Comments