Skip to main content


ನಟ ಯಶ್‌ ಕೊಲೆಗೆ ಸ್ಕೆಚ್‌: ಸೈಕಲ್‌ ಬಂಧನದಿಂದ ಗುಟ್ಟು ರಟ್ಟು

ಕುಖ್ಯಾತ ರೌಡಿ ಸೈಕಲ್‌ ರವಿ ಬಂಧನದಿಂದ ಸ್ಟಾರ್‌ ನಟ ಯಶ್‌ ಕೊಲೆಗೆ ಎರಡೂವರೆ ವರ್ಷಗಳ ಹಿಂದೆ ನಡೆದಿದ್ದ ಚರ್ಚೆಯ ಗುಟ್ಟು ರಟ್ಟಾಗಿದೆ. ಎರಡೂವರೆ ವರ್ಷಗಳ ಹಿಂದೆ ಯಶ್‌ ಕೊಲೆಗೆ ಮತ್ತೊಬ್ಬ ಸ್ಟಾರ್‌ ನಟನ ಜತೆ ಭೂಗತ ಜಗತ್ತಿನ ಕೆಲವರು ಚರ್ಚೆ ನಡೆಸಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಈ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಶುರುವಾಗಿದ್ದ ಸ್ಟಾರ್‌ವಾರ್‌ ಅನಾರೋಗ್ಯಕಾರಿ ತಿರುವು ಪಡೆದ ಬಗ್ಗೆಯೂ ಚರ್ಚೆಯಾಗಿತ್ತಲ್ಲದೆ, ಹಿರಿಯ ಪೊಲೀಸ್‌ ಅಧಿಕಾರಿಗಳ ಗಮನಕ್ಕೂ ಬಂದಿತ್ತು. ಜೂ.27 ರಂದು ಸಿಸಿಬಿ ಪೊಲೀಸರ ಗುಂಡೇಟು ತಿಂದು ಬಂಧಿತನಾಗಿರುವ ಸೈಕಲ್‌ ರವಿ ಜತೆಗೂ ಯಶ್‌ ಕೊಲೆ ಬಗ್ಗೆ ಚರ್ಚೆ ನಡೆದಿತ್ತು, ಆದರೆ ಈ ವಿಷಯದಲ್ಲಿ ಸೈಕಲ್‌ ರವಿಗಿಂತ ಹೆಚ್ಚು ಆಸಕ್ತಿ ತೋರಿಸಿದ್ದವನು ತ್ಯಾಗರಾಜನಗರದ ರೌಡಿ ಶೀಟರ್‌ ಕೋದಂಡ ಎನ್ನುತ್ತಾರೆ ಸಿಸಿಬಿ ಅಧಿಕಾರಿಗಳು.     

short by Pawan / more at Vijayakarnataka

Comments