Skip to main content


ನಟ ಸಾರ್ವಭೌಮ ರಿಲೀಸ್ ಡೇಟ್ ಫಿಕ್ಸ್..! ಅಭಿಮಾನಿಗಳಿಗೆ ಸಿಹಿ ಸುದ್ದಿ.

ಈ ವರ್ಷದ ಮೊದಲ ಆರು ತಿಂಗಳುಗಳಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಿದ್ದು ತೀರಾ ಕಡಿಮೆ. ಹೀಗಾಗಿ ಸ್ಟಾರ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ಹೀರೋ ಚಿತ್ರಗಳು ಮುಂದಿನ ಆರು ತಿಂಗಳಿನಲ್ಲಿ ರಿಲೀಸ್ ಆಗಲಿವೆ ಎಂದು ಆ ಆರು ತಿಂಗಳ ಮೇಲೆ ಕಣ್ಣಿಟ್ಟಿದ್ದಾರೆ. ಕೆಜಿಎಫ್ , ದಿ ವಿಲನ್ ಮತ್ತು ನಟ ಸಾರ್ವಭೌಮ ಚಿತ್ರಗಳ ಕೆಲಸ ಈಗಾಗಲೇ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಇದ್ದು ಅಭಿಮಾನಿಗಳು ಆ ಚಿತ್ರಗಳು ಯಾವಾಗ ಬಿಡುಗಡೆಯಾಗಲಿವೆ ಎಂದು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಇನ್ನು ನಟ ಪುನೀತ್ ಅಭಿನಯದ ನಟಸಾರ್ವಭೌಮ ಚಿತ್ರದ ಚಿತ್ರೀಕರಣ ಬಹುತೇಕ ಮುಗಿಯುವ ಹಂತ ತಲುಪಿದ್ದು ಚಿತ್ರವನ್ನು ಅಕ್ಟೋಬರ್ ತಿಂಗಳ 5 ನೇ ತಾರೀಖಿನಂದು ಬಿಡುಗಡೆ ಮಾಡುವ ಪ್ಲಾನ್ ಅನ್ನು ಚಿತ್ರತಂಡ ಹಾಕಿಕೊಂಡಿದೆಯಂತೆ.    

short by Pawan / more at Troll haida

Comments