Skip to main content


ಡಾ. ಶಿವಣ್ಣ ಈ ವಿಷಯಕ್ಕೆ ಎಲ್ಲರಿಗೂ ಇಷ್ಟವಾಗೋದು..!!!

ನಟ ಡಾ. ಶಿವರಾಜಕುಮಾರ್ ಅವರು ಸದಾ ಒಂದಿಲ್ಲೊಂದು ಸಿನಿಮಾಗಳಲ್ಲಿ ಬ್ಯೂಸಿಯಿರುತ್ತಾರೆ. ಕೆಲವು ಸ್ಟಾರ್ ಗಳು ವರ್ಷಕ್ಕೆ ಒಂದೋ ಎರಡೋ ಚಿತ್ರಗಳಲ್ಲಿ ಬ್ಯೂಸಿಯಿದ್ದರೆ ಶಿವಣ್ಣ ಮಾತ್ರ ವರ್ಷಕ್ಕೆ ಐದೋ ಆರೋ ಚಿತ್ರಗಳಲ್ಲಿ ನಟಿಸಿಯೂ ಆಗಿರುತ್ತದೆ. ಸಧ್ಯ 'ದಿ ವಿಲನ್' ಚಿತ್ರವು ತೆರೆಗೆ ಬರಲು ಸಿದ್ದತೆ ನಡೆಸಿದ್ದು, ಕವಚ, ದ್ರೋಣ, ರುಸ್ತುಂ, ಟಗರು-2 ಚಿತ್ರಗಳ ಚಿತ್ರೀಕರಣ ನಡೆಯುತ್ತಿವೆ. ಜೊತೆಗೆ ಯೋಗರಾಜ್ ಭಟ್ಟರಿಗೊಂದು ಚಿತ್ರ ಸೇರಿದಂತೆ 'ಎಸ್ ಆರ್ ಕೆ', ಖದರ್, ಐಸೂರ ದಂಗೆ, ಬಾದ್ ಷಾ, ಸೇರಿದಂತೆ ಈಗಾಗಲೇ ಅವರು ಮುಂದಿನ ಮೂರು ವರ್ಷಕ್ಕಾಗುವಷ್ಟು ಬ್ಯೂಸಿಯಿದ್ದಾರೆ. ಇದರೊಂದಿಗೆ ಬೇರೆ ಕೆಲವು ನಟರಂತೆ, ಇವರಲ್ಲ, ಯಾವುದಾದರೊಂದು ಚಿತ್ರ ಮುಗಿಸಿ ಬರುವ ತನಕ ಅವರು ಜೊತೆಗಿರುತ್ತಾರೆ. ಚಿತ್ರಗಳ ಪ್ರಚಾರ ಸೇರಿದಂತೆ, ಚಿತ್ರ ಸೋಲಲಿ ಗೆಲ್ಲಲಿ ಅವರು ಸದಾ ಚಿತ್ರತಂಡದವರೊಂದಿಗಿರುತ್ತಾರೆ.    

short by Pawan / more at Balkani News

Comments