Skip to main content


ಪೊಲೀಸ್​ ಠಾಣೆ ಮೆಟ್ಟಿಲೇರಿದ ವಜ್ರಮುನಿ ಕುಟುಂಬ.. !

ಕನ್ನಡ ಚಿತ್ರರಂಗ ಕಂಡ ಮೇರು ಖಳನಟ ವಜ್ರಮುನಿ ಕುಟುಂಬ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಅನುಮತಿ ಪಡೆಯದೇ ವಜ್ರಮುನಿ ಹೆಸರು ಬಳಕೆ ವಿರುದ್ಧ ದೂರು ನೀಡಿದೆ.

'ನಾವು ವಜ್ರಮುನಿ ಅವರ ಹೆಸರಿನ ಶೀರ್ಷಿಕೆ ಬಳಸಲು ಯಾವುದೇ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಅನುಮತಿ ನೀಡಿಲ್ಲ. ಅವರ ಭಾವಚಿತ್ರ, ಹಾಗೂ ಅವರು ನಟಿಸಿರುವ ಚಿತ್ರಗಳ ದೃಶ್ಯಗಳು, ಸಂಭಾಷಣೆಗಳನ್ನು ನಮ್ಮ ಅನುಮತಿ ಪಡೆಯದೇ ಬಳಸುವಂತಿಲ್ಲ. ಒಂದು ವೇಳೆ ಹೀಗೆ ಬಳಸಿಕೊಂಡ್ರೆ ಅಂತಹವರ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು' ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.      

short by Pawan / more at Eenadu India

Comments