Skip to main content


ಎಲ್ಲಿದ್ದಾರೆ? ಹೇಗಿದ್ದಾರೆ? ಸಾರಥಿಯ ಸುಂದರಿ ದೀಪಾ ಸನ್ನಿಧಿ

ದೀಪಾ ಸನ್ನಿಧಿ..ತನ್ನ ಸೌಂದರ್ಯ ಹಾಗೂ ಮುದ್ದಾದ ಮಾತಿನಿಂದಲೇ ಅಭಿಮಾನಿಗಳ ನಿದ್ದೆ ಕದ್ದ ನಟಿ. ಚಿತ್ರರಂಗಕ್ಕೆ ಬಂದ ಆರು ವರ್ಷಗಳಲ್ಲಿ ಸ್ಟಾರ್ ನಟರ ಜೊತೆಯಲ್ಲೇ ತೆರೆ ಹಂಚಿಕೊಂಡ ದೀಪಾ ಸನ್ನಿಧಿ ಸದ್ಯ ಒಂದು ವರ್ಷದಿಂದ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಯಾವುದೇ ಸಿನಿಮಾ ಹಾಗೂ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳದ ದೀಪಾ ಸನ್ನಿಧಿ ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಗೊಂದು ಹೀಗೊಂದು ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. 'ಚೌಕ' ಸಿನಿಮಾ ನಂತರ ನಟಿ ದೀಪಾ ಸನ್ನಿಧಿ ಯಾವುದೇ ಚಿತ್ರದಲ್ಲಿ ಅಭಿನಯ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಹಾಗಂತ ಅವಕಾಶಗಳು ಬಂದಿಲ್ಲ ಅಂತ ಅಲ್ಲ. ಯಾಕೆಂದರೆ ಸಾಕಷ್ಟು ಕಥೆಗಳನ್ನು ಕೇಳಿರುವ ದೀಪಾ ಸನ್ನಿಧಿ ಉತ್ತಮ ಪಾತ್ರ ಹಾಗೂ ಕಥೆಗಾಗಿ ಕಾದಿದ್ದಾರಂತೆ. ಚಿತ್ರೀಕರಣವಿಲ್ಲದೆ ಬಿಡುವಿರುವ ದೀಪಾ ಸನ್ನಿಧಿ ತಮ್ಮ ಸಮಯವನ್ನು ಹಾಳು ಮಾಡುತ್ತಿಲ್ಲ. ಅರ್ಧಕ್ಕೆ ಬಿಟ್ಟ ವಿದ್ಯಾಭ್ಯಾಸವನ್ನು ಸಂಪೂರ್ಣ ಮಾಡುತ್ತಿದ್ದಾರೆ. ಆಗಾಗ ಅಭಿಮಾನಿಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ.   

short by Pawan / more at Filmibeat

Comments