Skip to main content


ಮತ್ತೆ ಬಾಲಿವುಡ್​​ನಿಂದ ಕರೆ.....ಈ ಸಾರಿ ಸಲ್ಲುಗೆ ಗ್ರೀನ್ ಸಿಗ್ನಲ್​ ನೀಡ್ತಾರಾ ಸುದೀಪ್​ ?

ಕಳೆದ ವರ್ಷ ಬಾಲಿವುಡ್​ ಸುಲ್ತಾನ್​ ಸಲ್ಮಾನ್​ ಖಾನ್ ಅವರ ಟೈಗರ್ ಜಿಂದಾ ಹೈ ಚಿತ್ರದಲ್ಲಿ ಸ್ಯಾಂಡಲ್​​ವುಡ್​ನ ಅಭಿನಯ ಚಕ್ರವರ್ತಿ ನಟಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ, ಕಾರಣಾಂತರಗಳಿಂದ ಸುದೀಪ್ ಅವರು ಈ ಚಿತ್ರದಲ್ಲಿ ನಟಿಸಲಿಲ್ಲ. ಸದ್ಯ ಮತ್ತೇ ಅದೇ ಸಲ್ಲು ಅವರ ಚಿತ್ರದಲ್ಲಿ ನಟಿಸಲು ಸುದೀಪ್ ಅವರಿಗೆ ಆಹ್ವಾನ ಬಂದಿದೆಯಂತೆ. ಸಲ್ಮಾನ್ ಖಾನ್​ ಮುಖ್ಯ ಭೂಮಿಕೆಯಲ್ಲಿ ನಟಿಸಲಿರುವ 'ದಬಾಂಗ್​ 3' ಚಿತ್ರದಿಂದ ಸುದೀಪ್​ಗೆ ಆಫರ್ ಬಂದಿದೆ. ಮೂಲಗಳ ಪ್ರಕಾರ ಈ ಚಿತ್ರದಲ್ಲಿ ನೆಗೆಟಿವ್ ರೋಲ್​ ನಿಭಾಯಿಸಲಿದ್ದಾರಂತೆ ಸುದೀಪ್​. ಆದರೆ, ಇದುವರೆಗೂ ಈ ಕುರಿತು ಸುದೀಪ್ ಅವರಿಂದ ಯಾವುದೇ ಪ್ರತಿಕ್ರಿಯೆ ಕೇಳಿ ಬಂದಿಲ್ಲ.     

short by Pawan / more at Eenadu India

Comments