Skip to main content


ಗುಡ್​ ನ್ಯೂಸ್​ : ರಾಕಿಂಗ್​ ಸ್ಟಾರ್​ ಅಪ್ಪ ಆಗ್ತಿದ್ದಾರೆ...

ಸ್ಯಾಂಡಲ್​ವುಡ್​ ರಾಕಿಂಗ್​ ಸ್ಟಾರ್​ಗುಡ್​ ​ ನ್ಯೂಸ್​ವೊಂದು ಕೊಟ್ಟಿದ್ದಾರೆ. ಮದುವೆಯಾಗಿ ವರ್ಷ ಕಳೆದ್ರೂ ಇನ್ನು ಸ್ಟಾರ್​ ದಂಪತಿಯಿಂದ ಸ್ವೀಟ್​ ನ್ಯೂಸ್​ ಹೊರಬಿದ್ದಿಲ್ಲ ಎಂದು ಅಭಿಮಾನಿಗಳು ಕೊಂಚ ಬೇಸರಿಸಿಕೊಂಡಿದ್ದರು. ಆದರೆ ಯಶ್​ ರಮೇಶ್​​ ಅವರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮದಲ್ಲಿ ಸಸ್ಪೆನ್ಸ್​ ರಿವೀಲ್ ಮಾಡಿದ್ರು. ಅಮ್ಮ ಕೇಳಿದ ಪ್ರಶ್ನೆಗೆ ವಿಧಿ ಇಲ್ಲದೇ ಉತ್ತರಿಸಿ, ಅಮ್ಮಾ ನೀನು ಇಲ್ಲಿ ಕೇಳಿ ಬಚಾವ್​ ಆಗಿದ್ದೀಯಾ….ಕೆ ಡಿಸೆಂಬರ್​​​​​​ ತನಕ ತಾಳು ಎಂದು ನಕ್ಕುಉತ್ತರಿಸಿದ್ರು. ಸದ್ಯ ರಾಕಿಂಗ್​ ಸ್ಟಾರ್​ ಯಶ್​ ಮತ್ತು ಮೊಗ್ಗಿನ ಮನಸ್ಸು ಹುಡುಗಿ ರಾಧಿಕಾ ಪಂಡಿತ್​ ಅಪ್ಪ-ಅಮ್ಮ ಆಗುವ ವಿಷ್ಯ ಅಫಿಶಿಯಲ್ ಆಗಿದೆ. ರಾಧಿಕಾ ಪಂಡಿತ್‌ ಈಗ 4 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದ್ದು, ಸ್ವತಃ ಯಶ್‌ ತಮ್ಮ ಫೇಸ್‌ಬುಕ್‌ ಅಕೌಂಟ್‌ನಲ್ಲಿ ತಂದೆಯಾಗ್ತಿದ್ದೇನೆ ಎಂದು ಅನೌನ್ಸ್ ಮಾಡಿದ್ದಾರೆ. ಜೊತೆಗೆ ಒಂದು ವಿಡಿಯೋವನ್ನು ಹಾಕಿದ್ದಾರೆ. ಇದಕ್ಕೆ YGF ಎಂದು ಕರೆದಿದ್ದಾರೆ. ಇದೇ ಡಿಸೆಂಬರ್‌ನಲ್ಲಿ Yash Going to be a Father ಎಂದು ಬರೆದುಕೊಂಡಿದ್ದಾರೆ.  

short by Pawan / more at Bp9news

Comments