Skip to main content


ಕುಸ್ತಿಪಟು ಜೀವನಗಾಥೆಗೆ ಚಾಲೆಂಜಿಂಗ್​ ಸ್ಟಾರ್​​​​ ಫಿದಾ... ಬರಲಿದೆಯಂತೆ ಹಾವೇರಿ ಸಾಧಕನ ಸಿನಿಮಾ!

ಆತ ಅಖಾಡಕ್ಕೆ ಇಳಿದರೆ ಜಯ ಕಟ್ಟಿಟ್ಟ ಬುತ್ತಿ. ರಾಜ್ಯದಲ್ಲಿ ಅಷ್ಟೇ ಅಲ್ಲ ಬೇರೆ ರಾಜ್ಯಗಳಲ್ಲೂ ಕುಸ್ತಿಯ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ ಸಾಧಕ. ಆತ ಮುಡಿಗೇರಿಸಿಕೊಂಡಿರುವ ಪ್ರಶಸ್ತಿ ಹೆಚ್ಚು. ಈಗ ಆ ಕುಸ್ತಿಪಟುವಿನ ಬಯೋಗ್ರಫಿ ಇಟ್ಟುಕೊಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ. ಅಂದ ಹಾಗೆ ಆ ಕುಸ್ತಿಪಟು ಹೆಸರು ಕಾರ್ತಿಕ್ ಜೆ ಕಾಟೇ. ಮೂಲತಃ ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನವರು. ಕಾರ್ತಿಕ್ 2009 ರಲ್ಲಿ ದಾವಣಗೆರೆಯ ಕ್ರೀಡಾ ವಸತಿ ಶಾಲೆಗೆ ಸೇರಿಕೊಂಡಾಗಿನಿಂದ ಕುಸ್ತಿಯನ್ನೇ ತನ್ನ ಉಸಿರಾಗಿಸಿಕೊಂಡಿದ್ದಾರೆ. 2009 ರಿಂದ ಕುಸ್ತಿಯಲ್ಲಿ ತೊಡಗಿಕೊಂಡ ಕಾರ್ತಿಕ್ ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಮಾತ್ರವಲ್ಲ 2014 ರಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ಪಡೆದಿರುವ ಕಾರ್ತಿಕ್, ದಸರಾ ಕೇಸರಿ, ದಸರಾ ಕಂಠೀರವ, ಕರ್ನಾಟಕ ಕೇಸರಿ, ಕರ್ನಾಟಕ ಕಂಠೀರವ, ಲಕ್ಕುಂಡಿ ಕೇಸರಿ ಸೇರಿದಂತೆ ಎರಡು ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಸಾಧಕ.   

short by Pawan / more at Eenadu India

Comments