Skip to main content


ಗ್ಲಾಮರ್ ಇಲ್ಲದ ಕನ್ನಡ ನಟಿಯ ಫೇಸ್​ ಹೇಗಿದೆ ನೋಡಿ

ಡಿಂಪಲ್​ ಕ್ವೀನ್​ ರಚಿತಾ ರಾಮ್ ತಾನೊಂದು ನಾಯಕಿ ಪ್ರಧಾನ ಚಿತ್ರ ಒಪ್ಪಿಕೊಂಡಿರುವುದಾಗಿ 'ಸೀತಾರಾಮ ಕಲ್ಯಾಣ' ಚಿತ್ರದ ಪತ್ರಿಕಾಗೋಷ್ಠಿಯ ಸಂದರ್ಭದಲ್ಲಿ ಹೇಳಿದ್ದರು. ಆದರೆ, ಆ ಚಿತ್ರ ಯಾವುದು ಮತ್ತು ಅದರಲ್ಲಿ ಅವರ ಪಾತ್ರವೇನು ಎಂಬುದರ ಕುರಿತಾಗಿ ಹೇಳಿರಲಿಲ್ಲ. ಈಗ ಆ ವಿಷಯ ಬಹಿರಂಗವಾದೆ. ರಚಿತಾ, ಇದೇ ಮೊದಲ ಬಾರಿಗೆ 'ಏಪ್ರಿಲ್' ಎಂಬ ನಾಯಕಿ ಪ್ರಧಾನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರದಲ್ಲಿ ಅವರದ್ದು ಗ್ಲಾಮರ್ ಇಲ್ಲದ ಪಾತ್ರವಂತೆ. ಈ ಚಿತ್ರವನ್ನು ಸತ್ಯ ರಾಯಲ ಎನ್ನುವವರು ನಿರ್ದೇಶಿಸುತ್ತಿದ್ದಾರೆ. ಇದೊಂದು ನೈಜ ಘಟನೆಯೊಂದನ್ನು ಆಧರಿಸಿ ಮಾಡಿರುವ ಕಥೆಯಂತೆ. ಚಿತ್ರದಲ್ಲಿ ರಚಿತಾ ಅವರು ಏಪ್ರಿಲ್ ಡಿಸೋಜಾ ಎನ್ನುವ ಪಾತ್ರ ಮಾಡುತ್ತಿದ್ದು, ಚಿತ್ರಕ್ಕೆ 'ಏಪ್ರಿಲ್' ಎಂದು ಟೈಟಲ್ ಇಡಲು ಒಂದು ಕಾರಣವಿದೆಯಂತೆ. ವಸಂತಕಾಲ ಬಂದು ಎರಡು ತಿಂಗಳ ನಂತರ ಏಪ್ರಿಲ್ ತಿಂಗಳು ಬರಲಿದ್ದು, ಅದರಂತೆ ನಾಯಕಿಯ ಬದುಕಿನಲ್ಲೊಂದು ಎರಡನೇ ಛಾನ್ಸ್ ಸಿಗುತ್ತದೆ. ಆ ಕಾರಣಕ್ಕಾಗಿ ಆಕೆಯ ತಂದೆ-ತಾಯಿ ಏಪ್ರಿಲ್ ಡಿಸೋಜಾ ಎಂದು ಹೆಸರಿಟ್ಟಿರುತ್ತಾರೆ. ಅದೇ ಕಾರಣಕ್ಕೆ 'ಏಪ್ರಿಲ್' ಎಂಬ ಹೆಸರನ್ನು ಚಿತ್ರಕ್ಕೆ ಇಡಲಾಗಿದೆಯಂತೆ.  

short by Pawan / more at Eenadu India

Comments