Skip to main content


ಹೆಬ್ಬುಲಿ ನಿರ್ಮಾಪಕನ ಚಿತ್ರಕ್ಕೆ ಕಂಡಿಷನ್ ಹಾಕಿದ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಹೆಬ್ಬುಲಿ ನಿರ್ಮಾಪಕ ಉಮಾಪತಿ ಕಾಂಬಿನೆಷನಲ್ಲೊಂದು ಸಿನಿಮಾ ಬರ್ತಿದೆ ಎಂಬುದು ಸುದ್ದಿಯಾಗಿತ್ತು. ಈ ವಿಷ್ಯವನ್ನ ಖುದ್ದು ಉಮಾಪತಿ ಅವರೇ ಖಚಿತ ಪಡಿಸಿದ್ದರು. ಚಿತ್ರದ ಬಗ್ಗೆ ಈಗ ಕುತೂಹಲಕಾರಿ ಸಂಗತಿಗಳನ್ನ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ. ಉಮಾಪತಿ ಅವರ ಜೊತೆ ಸಿನಿಮಾ ಮಾಡಲು ದರ್ಶನ್ ಕಾಲ್ ಶೀಟ್ ಕೊಟ್ಟಿದ್ದಾರೆ ಎಂಬುದು ಸ್ವತಃ ನಿರ್ಮಾಪಕರಿಂದಲೇ ಖಚಿತವಾಗಿದೆ. ಆದ್ರೆ, ಈ ಸಿನಿಮಾ ಮಾಡಲು ಚಾಲೆಂಜಿಂಗ್ ಸ್ಟಾರ್ ಒಂದು ಕಂಡಿಷನ್ ಹಾಕಿದ್ದಾರೆ. ಅದೇನಪ್ಪಾ ಅಂದ್ರೆ, ''ಈ ಚಿತ್ರದಲ್ಲಿ ಶೇಕಡಾ 96 ರಷ್ಟು ಸಾಧ್ಯವಾದ್ರೆ 100 ರಷ್ಟು ಕನ್ನಡದವರನ್ನೇ ಹಾಕಿಕೊಂಡು ಕೆಲಸ ಮಾಡಿ. ಕಲಾವಿದರು, ತಂತ್ರಜ್ಞರು ಎಲ್ಲರೂ ಕನ್ನಡದವರಿಗೆ ಅವಕಾಶ ಕೊಡಿ'' ಎಂದಿದ್ದಾರಂತೆ.    

short by Pawan / more at Filmibeat

Comments