Skip to main content


ನೂರು ವರ್ಷವಾದರೂ ನಮ್ಮ ಪ್ರೀತಿ ಕಡಿಮೆ ಆಗುವುದಿಲ್ಲ: ರಶ್ಮಿಕಾ ಮಂದಣ್ಣ

ಸ್ಯಾಂಡಲ್‌ವುಡ್‌ನ ಕ್ಯೂಟ್‌ ಜೋಡಿ ರಕ್ಷಿತ್‌ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಆಗಿ ಒಂದು ವರ್ಷ ಕಳೆದಿದೆ. ಇದೇ ಸಮಯದಲ್ಲಿ ಒಬ್ಬರಿಗೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ನೆನಪುಗಳನ್ನು ಹೇಳಿಕೊಂಡಿದ್ದಾರೆ. ನಮ್ಮ ಪ್ರೀತಿಯಾಗಿ ವರ್ಷವಾಯಿತು. ನಂಬಲಾಗುತ್ತಿಲ್ಲ ಎಂದು ರಕ್ಷಿತ್‌ ಹೇಳಿದರೆ, ನಾವು ಇನ್ನೂ ಒಂದಷ್ಟು ದಿನ ಪ್ರೀತಿ ಮಾಡಿಕೊಂಡಿರುತ್ತೇವೆ ಎಂದು ರಶ್ಮಿಕಾ ತಿಳಿಸಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್‌ವುಡ್‌ನ ಹಾಟ್‌ ಟಾಪಿಕ್‌ ಆಗಿದ್ದ ಜೋಡಿ ಆದಷ್ಟು ಬೇಗ ತೆರೆ ಮೇಲೆ ಬರಲಿ ಎಂದು ಜನ ಆಶಿಸುತ್ತಿದ್ದಾರೆ, ಇಬ್ಬರೂ ಹೀಗೆ ಪರಸ್ಪರ ಪ್ರೀತಿ ಮಾಡಿಕೊಂಡಿರಲಿ ಎಂದು ಎಲ್ಲರೂ ಸೊಷಿಯಲ್‌ ಮೀಡಿಯಾದಲ್ಲಿ ವಿಷ್‌ ಮಾಡಿದ್ದಾರೆ.   

short by Pawan / more at Vijayakarnataka

Comments