Skip to main content


ಸಾಯುವ ಸ್ಥಿತಿಯಲ್ಲಿದ್ದ ಬುಲೆಟ್ ಪ್ರಕಾಶ್ ಬದುಕಿ ಬಂದಿದ್ದೆ ಆಶ್ಚರ್ಯ!

ಹಾಸ್ಯ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಸರಿ ಇರಲಿಲ್ಲ. ಕೆಲ ತಿಂಗಳು ಗಳ ಹಿಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಈಗ ಗುಣಮುಖರಾಗಿದ್ದಾರೆ. ನಿಜ ಹೇಳಬೇಕು ಅಂದರೆ ಬುಲೆಟ್ ಪ್ರಕಾಶ್ ಸಾವನ್ನು ಗೆದ್ದು ಬಂದಿದ್ದಾರೆ. ಬುಲೆಟ್ ಪ್ರಕಾಶ್ ಎಂದ ತಕ್ಷಣ ಅವರ ದೊಡ್ಡ ದೇಹ ನೆನಪಾಗುತ್ತದೆ. ಅದು ಅವರ ಐಡೆಂಟಿಟಿ ಕೂಡ ಆಗಿತ್ತು. ಆದರೆ 150 ಕೆಜಿ ತೂಕ ಇದ್ದ ಬುಲೆಟ್ ಡಯಟ್ ಮಾಡಿ ಸಣ್ಣ ಆಗಲು ಹೊರಟಿದ್ದರು. ಹೀಗಿರುವಾಗಲೇ, ಅವರಿಗೆ ಜಾಂಡಿಸ್ ಕೂಡ ಆವರಿಸಿತ್ತು. ಜಾಂಡಿಸ್ ನಿಂದ ಸಾಯುವ ಸ್ಥಿತಿ ತಲುಪಿ ಬಿಟ್ಟಿದ್ದರು ಬುಲೆಟ್ ಪ್ರಕಾಶ್. ಅಂದಹಾಗೆ, ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ಬುಲೆಟ್ ಪ್ರಕಾಶ್ ತಮ್ಮ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.     

short by Pawan / more at Filmibeat

Comments