Skip to main content


ದರ್ಶನ್​ ಅಭಿನಯಿಸಲಿರುವ ಒಡೆಯರ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ!?

ಚಾಲೆಂಜಿಂಗ್ ಸ್ಟಾರ್ ದರ್ಶನ ಅಭಿನಯಿಸುತ್ತಿರುವ ಒಡೆಯರ್ ಚಿತ್ರದ ಹೆಸರನ್ನು ಬದಲಾಯಿಸುವಂತೆ ಕನ್ನಡ ಕ್ರಾಂತಿದಳ ಕೆ.ಆರ್. ಠಾಣೆಗೆ ದೂರು ನೀಡಿದೆ. ವಿಧಾನ ಪರಿಷತ್ ಸದಸ್ಯ ಹಾಗೂ ಚಲನಚಿತ್ರ ನಿರ್ಮಾಪಕ ಸಂದೇಶ ನಾಗರಾಜ್ ನಿರ್ಮಾಣ ಮಾಡುತ್ತಿರುವ ನೂತನ ಚಲನಚಿತ್ರ ಒಡೆಯರ್ ಚಿತ್ರಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಒಡೆಯರ್ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಅಭಿನಯಿಸುತ್ತಿದ್ದು, ಚಿತ್ರದ ಟೈಟಲ್ ಬದಲಾಯಿಸುವಂತೆ ಕನ್ನಡ ಕ್ರಾಂತಿದಳದ ಸಂಘಟನೆಯವರು ಇಂದು ಕೆ.ಆರ್. ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಂಘಟನೆಯವರು, ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ಅವರ ಮೇಲೆ ಅಪಾರವಾದ ಗೌರವ, ಅಭಿಮಾನವಿದೆ. ರೌಡಿಸಂ, ಹಾಸ್ಯ ಹಾಗೂ ವ್ಯಾಪಾರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡಿವುದಿಲ್ಲ ಎಂದಿದ್ದಾರೆ.   

short by Pawan / more at Eenadu India

Comments