Skip to main content


'ಆಪ್ತಮಿತ್ರ'ರಿಗೆ 'ಆಪತ್ಬಾಂಧವ' ಈ 'ದಾಸ' ದರ್ಶನ್

ಸಾಮಾನ್ಯವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ಮಾಪಕ ನಟ. ನಿರ್ಮಾಪಕರು ಹಾಕಿದ ಬಂಡವಾಳ ವಾಪಸ್ ಬರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುವ ಕಲಾವಿದ. ಕೇವಲ ತಮ್ಮ ಚಿತ್ರದ ನಿರ್ಮಾಪಕರ ಬಗ್ಗೆ ಮಾತ್ರವಲ್ಲ, ತಮ್ಮ ಆಪ್ತರ ಚಿತ್ರಗಳಿಗಾಗಿಯೂ ಡಿ ಬಾಸ್ ಸಹಾಯಕ್ಕೆ ನಿಲ್ಲುತ್ತಾರೆ. ಇದನ್ನ ಸಹಾಯ ಎನ್ನಬೇಕಾ ಅಥವಾ ಕರ್ತವ್ಯ ಎನ್ನಬೇಕೋ ಆದ್ರೆ, 'ಆಪ್ತಮಿತ್ರ'ರಿಗೆ ಈ 'ದಾಸ' ಯಾವಾಗಲೂ 'ಆಪತ್ಬಾಂಧವ' ಎನ್ನುವುದು ನಿಜ.

ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯಿಸಲಿರುವ ಹೊಸ ಸಿನಿಮಾ 'ಫೈಟರ್'ಗೆ ಚಾಲೆಂಜಿಂಗ್ ಸ್ಟಾರ್ ಕ್ಲಾಪ್ ಮಾಡಿ ಶುಭ ಹಾರೈಸಿದರು. ನೂತನ್ ಉಮೇಶ್ ಈ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದಲ್ಲಿ ಸೆಟ್ಟೇರಿದ 'ಜಂಟಲ್ ಮ್ಯಾನ್' ಚಿತ್ರಕ್ಕೆ 'ಡಿ ಬಾಸ್' ದರ್ಶನ್ ಕ್ಲಾಪ್ ಮಾಡಿ ಸಾಥ್ ನೀಡಿದರು. ಅಷ್ಟೇ ಅಲ್ಲದೇ, ಈ ಚಿತ್ರದಲ್ಲಿ ವಿಶೇಷ ಪಾತ್ರವನ್ನ ಕೂಡ ನಿರ್ವಹಿಸಲಿದ್ದಾರಂತೆ.  

short by Pawan / more at Filmibeat

Comments