Skip to main content


ಸ್ಟಾರ್ ವಾರ್​ಗೆ ಬ್ರೆಕ್ ಹಾಕಲು ಮುಂದಾದ್ರು ಡಿ ಬಾಸ್!

ದಿನೇ ದಿನೇ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಸ್ಟಾರ್ ವಾರ್​ಗೆ ಕಡಿವಾಣ ಹಾಕಲು ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ತೂಗುದೀಪ್​ ಮುಂದಾಗಿದ್ದಾರೆ. ಇತ್ತೀಚೆಗೆ ಹಲವು ಜಿಲ್ಲೆಗಳಿಂದ ಅಭಿಮಾನಿಗಳ ಸಂಘದ ಅಧ್ಯಕ್ಷರನ್ನು ಕರೆಸಿ ಮಾತನಾಡಿರುವ ದರ್ಶನ್​, ಇನ್ನು ಮುಂದೆ ಸ್ಟಾರ್​ವಾರ್​ ಕುರಿತಾದ ಯಾವುದೇ ಟ್ರೋಲ್​ಗಳಲ್ಲಿ ಭಾಗಿಯಾಗದಿರಲು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ದರ್ಶನ ಸಮ್ಮಖದಲ್ಲೇ ನಡೆದ ಅಧಿಕೃತ ಫೇಸ್​ಬುಕ್​ ಪೇಜ್​ ಅಡ್ಮಿನ್​ಗಳ ಸಭೆಯಲ್ಲಿ 29 ಜನ ಭಾಗಿಯಾಗಿದ್ದರು. ಇತರ ನಟರ ಅಭಿಮಾನಿಗಳಗೂ ಮನವಿ ಮಾಡಿಕೊಂಡಿರುವ ದರ್ಶನ್ ಫ್ಯಾನ್ಸ್, ನಮ್ಮ ನಟನ ಬಗ್ಗೆ ನೀವೂ ಕೆಟ್ಟದಾಗಿ ಮಾತನಾಡ ಬೇಡಿ ಎಂದು ತಿಳಿಸಿದ್ದಾರೆ. ಬೇರೆ ನಟರ ಬಗ್ಗೆ ಕಮೆಂಟ್​ ಮಾಡಿದರೆ ಕಠಿಣ ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ದರ್ಶನ್​ ಅಭಿಮಾನಿಗಳಿಗೆ ಸಂಘದ ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.    

short by Pawan / more at Vijayavani

Comments