Skip to main content


ಬೆಲ್​ಗ್ರೇಡ್​ಗೆ ಸುದೀಪ್ ವಿದಾಯ

ಕೆಲವೇ ದಿನಗಳ ಹಿಂದೆ ವಿದೇಶಕ್ಕೆ ಹಾರಿದ್ದ ಚಿತ್ರತಂಡ ಈಗಾಗಲೇ ಪ್ಯಾಕ್​ಅಪ್ ಎಂದುಬಿಟ್ಟಿದೆ. ಒಂದು ಹಂತದ ಶೂಟಿಂಗ್ ಮುಗಿಸಿಕೊಂಡ ಖುಷಿಯಲ್ಲೇ ಇಡೀ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ ಸುದೀಪ್. ಜೂನ್ 17ರಂದು ಸರ್ಬಿಯಾದ ರಾಜಧಾನಿ ಬೆಲ್​ಗ್ರೇಡ್ ನಗರದಲ್ಲಿ ಚಿತ್ರೀಕರಣಕ್ಕೆ ಚಾಲನೆ ನೀಡಲಾಗಿತ್ತು. ಸರ್ಬಿಯಾಗೆ ತೆರಳಿದ್ದ ಸುದೀಪ್​ಗೆ ಅಲ್ಲಿನ ಸಾಂಪ್ರದಾಯಿಕ ಶೈಲಿಯಲ್ಲಿ ಸಖತ್ ಸ್ವಾಗತ ಸಿಕ್ಕಿತ್ತು.

ಅಭಿಮಾನಿಗಳ ಕುತೂಹಲ ಹೆಚ್ಚಿಸುವ ಸಲುವಾಗಿ ಚಿತ್ರೀಕರಣದ ಚಿಕ್ಕ ವಿಡಿಯೋ ತುಣುಕನ್ನು ಹರಿಬಿಟ್ಟಿತ್ತು ‘ಕೋಟಿಗೊಬ್ಬ 3’ ಬಳಗ. ಅದರಲ್ಲಿದ್ದ ಭರ್ಜರಿ ಕಾರ್ ಚೇಸ್ ಸನ್ನಿವೇಶದ ಝುಲಕ್ ಕಂಡು ಫಿದಾ ಆದ ಅಭಿಮಾನಿಗಳು ಸಿಕ್ಕಾಪಟ್ಟೆ ಲೈಕ್ಸ್ ಒತ್ತಿದ್ದಾರೆ. ಅಂದಾಜು 20 ದಿನಗಳ ಶೂಟಿಂಗ್ ಮುಗಿಸಿಕೊಂಡಿರುವ ಸುದೀಪ್, ಇಡೀ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ. ‘ಬೆಲ್​ಗ್ರೇಡ್​ನಲ್ಲಿ ಕಳೆದ ದಿನಗಳು ತುಂಬ ಚೆನ್ನಾಗಿದ್ದವು. ನಿರ್ಮಾಪಕ ಸೂರಪ್ಪ ಬಾಬು ನೀಡಿದ ಆತಿಥ್ಯ ಅದ್ಭುತವಾಗಿತ್ತು. ಸ್ಥಳೀಯ ಸ್ಟಂಟ್ ತಂಡ ನೀಡಿದ ಪ್ರೋತ್ಸಾಹವೂ ಚೆನ್ನಾಗಿತ್ತು’ ಎಂದಿದ್ದಾರೆ ಸುದೀಪ್.   

short by Pawan / more at Vijayavani

Comments