Skip to main content


ವಠಾರ ಧಾರಾವಾಹಿ ಖ್ಯಾತಿಯ ಹಾಸ್ಯನಟ ಮಲ್ಲೇಶ್ ಇನ್ನಿಲ್ಲ

'ವಠಾರ' ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟ ನಟ ವಠಾರ ಮಲ್ಲೇಶ್ ಇಂದು ಬೆಳ್ಳಿಗ್ಗೆ ವಿಧಿವಶವಾಗಿದ್ದಾರೆ. ಧಾರಾವಾಹಿಗಳಲ್ಲಿ ಹಾಸ್ಯ ನಟನಾಗಿ ಪ್ರಖ್ಯಾತಿ ಪಡೆದಿದ್ದ ನಟ ಮಲ್ಲೇಶ್ ಅನಂತರ ಸಾಕಷ್ಟು ಚಿತ್ರಗಳಲ್ಲಿಯೂ ಹಾಸ್ಯ ನಟನಾಗಿ ಅಭಿನಯ ಮಾಡಿದ್ದರು. ಚಿಕ್ಕ ವಯಸ್ಸಿನಿಂದಲೇ ಮರುವಿನ ಕಾಯಿಲೆಯನ್ನು ಹೊಂದಿದ್ದ ಮಲ್ಲೇಶ್ ಅವರನ್ನು ತನ್ನತ್ತ ಕರೆದುಕೊಳ್ಳುವುದನ್ನು ಮಾತ್ರ ವಿಧಿ ಮರೆಯಲಿಲ್ಲ. ಕನ್ನಡ ಅಭಿಮಾನಿಗಳಿಗೆ ಹಾಗೂ ಚಿತ್ರರಂಗಕ್ಕೆ ಪರಿಚಯವಿದ್ದ ಮಲ್ಲೇಶ್ ನಡೆದು ಬಂದ ಹಾದಿ ತುಂಬ ಕಠಿಣವಾದದ್ದು. 42 ವರ್ಷ ವಯಸ್ಸಾಗಿದ್ದ ಮಲ್ಲೇಶ್ ಸುಮಾರು ವರ್ಷಗಳಿಂದ ಖಾಯಿಲೆಯಿಂದ ಬಳಲುತ್ತಿದ್ದ ಮಲ್ಲೇಶ್ ಕಳೆದ ಇಪ್ಪತ್ತು ದಿನಗಳ ಹಿಂದೆ ಕಿಡ್ನಿ ವೈಫಲ್ಯ ಕಾರಣದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.   

short by Pawan / more at Filmibeat

Comments