Skip to main content


ಮದುವೆ ಬಗ್ಗೆ ಸ್ಪಷ್ಟನೆ ನೀಡಿದ ಕನ್ನಡ ರ‍್ಯಾಪರ್​ ಚಂದನ್ ಶೆಟ್ಟಿ

ಎರಡು ದಿನಗಳಿಂದ ಕನ್ನಡ ರ‍್ಯಾಪರ್​ ಚಂದನ್ ಶೆಟ್ಟಿ ಮತ್ತು ಬಿಗ್ ಬಾಸ್ ಖ್ಯಾತಿಯ ಬಾರ್ಬಿ ಗರ್ಲ್ ನಿವೇದಿತಾ ಗೌಡ ಇಬ್ಬರು ಮದುವೆ ಆಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿತ್ತು. ಇಂದು ಚಂದನ್ ತಮ್ಮ ಮದುವೆ ಬಗ್ಗೆ ಎದ್ದಿರುವ ಎಲ್ಲ ಗಾಸಿಪ್ ಗಳಿಗೂ ಸ್ಪಷ್ಟನೆ ನೀಡಿದ್ದಾರೆ. ನಗರದ ಶೇಷಾದ್ರಿಪುರಂ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಂದನ್ ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ, ನಾನು ಒಂದು ಗೋಲ್ ರೀಚ್ ಮಾಡಬೇಕು ಅಂತಾ ಐದು ವರ್ಷ ಪ್ಲಾನ್ ಮಾಡಿಕೊಂಡಿದ್ದೇನೆ. ನಾನು ಗುರಿಯನ್ನು ತಲುಪುತ್ತಿದ್ದೇನೆ ಅಂತಾ ಅನಿಸಿದಾಗ ಮದುವೆ ಆಗಲಿದ್ದಾನೆ ಎಂದು ಸ್ಪಷ್ಟಪಡಿಸಿದರು.   

short by Pawan / more at Public Tv

Comments