Skip to main content


ಕನ್ನಡ ಕಲಿಕೆಯಲ್ಲಿ ಅನುಪಮಾ ತಲ್ಲೀನ

‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ಅಭಿನಯದ ‘ನಟಸಾರ್ವಭೌಮ’ ಚಿತ್ರಕ್ಕೆ ನಾಯಕಿಯಾಗಿ ರಚಿತಾ ರಾಮ್ ಈ ಹಿಂದೆಯೇ ಆಯ್ಕೆಯಾಗಿದ್ದರು. ನಂತರ ‘ಪ್ರೇಮಂ’ ಖ್ಯಾತಿಯ ನಟಿ ಅನುಪಮಾ ಪರಮೇಶ್ವರನ್ ಕೂಡ ಚಿತ್ರತಂಡ ಸೇರಿಕೊಂಡಿದ್ದರು. ಆಗಸ್ಟ್​ನಲ್ಲಿ ಅನುಪಮಾ ಪಾಲಿನ ಶೂಟಿಂಗ್ ಶುರುವಾಗಲಿದೆ. ಆದರೆ, ಅದಕ್ಕೂ ಮುನ್ನ ಅವರು ಕನ್ನಡ ಕಲಿಕೆ ಆರಂಭಿಸಿದ್ದಾರೆ! ತಾವು ನಟಿಸುವ ಚಿತ್ರಕ್ಕೆ ನ್ಯಾಯ ಒದಗಿಸಬೇಕು ಎಂಬ ಉದ್ದೇಶ ಅವರದ್ದು.

ಮೂರು ವರ್ಷಗಳ ಹಿಂದೆ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ ಅನುಪಮಾ ಮಲಯಾಳಂ, ತೆಲುಗು, ತಮಿಳು, ಚಿತ್ರಗಳಲ್ಲಿ ಅಭಿನಯಿಸಿದ್ದರು. ದಕ್ಷಿಣ ಭಾರತದಲ್ಲಿ ಖ್ಯಾತಿ ಪಡೆದುಕೊಂಡಿದ್ದರೂ ಕನ್ನಡದಲ್ಲಿ ಬಣ್ಣಹಚ್ಚಲು ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ವಿಶೇಷವೆಂದರೆ, ಅವರಿಗೆ ಸ್ಯಾಂಡಲ್​ವುಡ್​ನಲ್ಲಿ ನಟಿಸುವ ಆಲೋಚನೆಯೇ ಇರಲಿಲ್ಲವಂತೆ. ನಿರ್ದೆಶಕ ಪವನ್ ಒಡೆಯರ್ ಬಳಿ ಕಥೆ ಕೇಳಿದ ನಂತರವೇ ಈ ಚಿತ್ರ ಒಪ್ಪಿಕೊಳ್ಳಬೇಕು ಎಂದೆನಿಸಿತು ಎಂಬುದು ಅವರ ಅಭಿಪ್ರಾಯ.   

short by Pawan / more at Vijayavani

Comments