Skip to main content


ಇವರು ಬಿಗ್ ಬಾಸ್ ಗೆ ಬಂದ್ರೆ ನಾವ್ಯಾರೂ ಬರಲ್ಲ ಅಂತಿದ್ದಾರೆ ಉಳಿದ ಸ್ಪರ್ಧಿಗಳು.. ಅವರು ಯಾರು ಗೊತ್ತಾ?

ಕಳೆದ ಬಿಗ್ಬಾಸ್ ಸೀಸನ್ ಗಳ ಸಕ್ಸಸ್ ನಂತರ ಇದೀಗ ಮುಂದಿನ ಸೀಸನ್ ಆರಂಭವಾಗುತ್ತಿದ್ದು ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಯಾರೆಲ್ಲ ಸ್ಪರ್ಧಿಗಳು ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಇತ್ತೀಚಿನ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿಚಿತ್ರ ಗಾಯನದ ಮೂಲಕ ಸಾಕಷ್ಟು ಸದ್ದು ಮಾಡುತ್ತಿರುವ ವ್ಯಕ್ತಿ ತುಳಸಿ ಪ್ರಸಾದ್. ಚಿತ್ರಗೀತೆಗಳನ್ನು ತನ್ನ ವಿಚಿತ್ರ ಕಂಠಸಿರಿಯಲ್ಲಿ ಹಾಡಿ ಅವುಗಳನ್ನು ಹಾಳು ಮಾಡುತ್ತಿರುವ ತುಳಸಿ ಪ್ರಸಾದ್ ಅಂದರೆ ಸಾಮಾಜಿಕ ಜಾಲತಾಣದಲ್ಲಿ ಗೊತ್ತಿರುವ ವ್ಯಕ್ತಿ.

ಇದೀಗ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ತುಳಸಿ ಪ್ರಸಾದ್ ಬಿಗ್ ಬಾಸ್ ಹೌಸ್ ಗೆ ಬರುವುದರ ಬಗ್ಗೆ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಹೌದು ಒಂದು ವೇಳೆ ತುಳಸಿ ಪ್ರಸಾದ್ ಏನಾದರೂ ಬಿಗ್ ಬಾಸ್ ಹೌಸ್ ಗೆ ಬಂದರೆ ನಾವ್ಯಾರೂ ಕಾರ್ಯಕ್ರಮವನ್ನೇ ನೋಡುವುದಿಲ್ಲ ಎಂದು ಪ್ರೇಕ್ಷಕರು ತಮ್ಮ ಅಭಿಪ್ರಾಯವನ್ನು ತಿಳಿಸುತ್ತಿದ್ದರೆ ಮತ್ತೊಂದೆಡೆ ಇನ್ನುಳಿದ ಆಯ್ಕೆಯಾಗಿರುವ ಸ್ಫರ್ಧಿಗಳು ಸಹ ತುಳಸಿ ಪ್ರಸಾದ್ ಬಿಗ್ ಬಾಸ್ ಗೆ ಬಂದರೆ ನಾವು ಭಾಗವಹಿಸುವುದೇ ಇಲ್ಲ ಎಂದು ಹೇಳತೊಡಗಿದ್ದಾರೆ ಎನ್ನಲಾಗಿದೆ.    

short by Pawan!

Comments