Skip to main content


ಕುರುಕ್ಷೇತ್ರದಲ್ಲಿ ಕಿರಿಕಿರಿ!

ಚಾಲೆಂಜಿಂಗ್​ ಸ್ಟಾರ್​ ದರ್ಶನ್​​ ಅಭಿನಯದ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರದ ಫಸ್ಟ್​ ಲುಕ್​ ಟೀಸರ್ ​​ನಿಂದ ಶುರುವಾದ ಕಿರಿಕ್,​​ ಈಗ ಸಿನಿಮಾ ರಿಲೀಸ್ ​ಗೆ ಕುತ್ತು ತರೋ ಮಟ್ಟಕ್ಕೆ ಬಂದು ನಿಂತಿದೆ. ದರ್ಶನ್​​​​ ಕುರುಕ್ಷೇತ್ರ ಫಸ್ಟ್ ಲುಕ್​​​ ಟೀಸರ್​ ರಿಲೀಸ್​ ಆಗಿ, ಒಳ್ಳೆ ರೆಸ್ಪಾನ್ಸ್​ ಏನೋ ಪಡೀತು. ಆದ್ರೆ ಕುರುಕ್ಷೇತ್ರದ ನಿಖಿಲ್​ ಕುಮಾರಸ್ವಾಮಿ ಟೀಸರ್​ ದರ್ಶನ್​​​ ಟೀಸರ್ ಗಿಂತ ಹೆಚ್ಚು ಪಾಪ್ಯುಲರ್​ ಆಯ್ತು. ಇದಕ್ಕೆ ಕಾರಣ ಟೀಸರ್ ​ಗಳಲ್ಲಿ ಇದ್ದ ಕಂಟೆಂಟ್​ ಅನ್ನೋದು ಸಿನಿಮಾ ಬಲ್ಲವರ ಮಾತು.

ಆದ್ರೆ ದರ್ಶನ್​​ ಅಭಿನಯದ 50ನೇ ಸಿನಿಮಾ ಅನ್ನೋ ಹೈಪ್​ ಜೊತೆಗೆ ಶುರುವಾದ ಸಿನಿಮಾದಲ್ಲಿ ನಿಖಿಲ್​​ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಕುರುಕ್ಷೇತ್ರ ಸಿನಿಮಾದಲ್ಲಿ ಅಷ್ಟು ಪ್ರಾಮುಖ್ಯತೆ​​​ ಇಲ್ಲದ ಅಭಿಮಾನ್ಯು ಪಾತ್ರದಲ್ಲಿ ನಿಖಿಲ್​ ನಟಿಸಿದ್ರು. ನಿಖಿಲ್​​ ಇದ್ದಾರೆ ಅನ್ನೋ ಕಾರಣಕ್ಕೆ ಹೈಪ್​ ನೀಡಲಾಗಿದೆ, ಕುಮಾರ ಸ್ವಾಮಿ ಅವ್ರನ್ನ ಓಲೈಸೋ ಸಲುವಾಗಿ ನಿಖಿಲ್​ ಪಾತ್ರವನ್ನ ಹೆಚ್ಚಾಗಿ ಬಿಂಬಿಸಲಾಗಿದೆ​ ಎನ್ನುವ ಮಾತು ಕೇಳಿಬರುತ್ತಿದೆ. ದರ್ಶನ್​ ಪಾತ್ರದಷ್ಟೆ ನಿಖಿಲ್ ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ ಅನ್ನೋದೇ, ಈಗ ಸಿನಿಮಾ ರಿಲೀಸ್ ಆಗೋದಕ್ಕೆ ಕಾರಣ ಎನ್ನಲಾಗಿದೆ.        

short by Pawan / more at Balkani News


Comments