Skip to main content


ಕುರುಕ್ಷೇತ್ರ ವಿಳಂಬವಾಗುತ್ತಿರುವುದೇಕೆ...ಗಾಂಧಿನಗರದಲ್ಲಿ ಹರಿದಾಡುತ್ತಿರುವ ಆ ಸುದ್ದಿ ನಿಜವೇ?

ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ ಕುರುಕ್ಷೇತ್ರದ ಶೂಟಿಂಗ್​ ಮುಗಿದು ಕೆಲ ತಿಂಗಳುಗಳೇ ಕಳೆದಿವೆ. ಹಾಗೆ ನೋಡಿದ್ರೆ ಜುಲೈ ಅಂತ್ಯದಲ್ಲಿ ಈ ಚಿತ್ರದ ಹಾಡುಗಳೂ ಬಿಡುಗಡೆಯಾಗಬೇಕಿತ್ತು. ಆದರೆ, ಜುಲೈ ತಿಂಗಳು ಮುಗಿದರೂ ಆಡಿಯೂ ರಿಲೀಸ್​ ಆಗಲಿಲ್ಲ. ಇನ್ನು ಆಗಸ್ಟ್​​ನಲ್ಲೂ ಚಿತ್ರ ಬಿಡುಗಯಾಗುವ ಯಾವ ಸೂಚನೆಯೂ ಕಾಣುತ್ತಿಲ್ಲ. ಈ ವಿಳಂಬಕ್ಕೆ ನಟ ನಿಖಿಲ್ ಕುಮಾರ್ ಎಂದು ಹೇಳಲಾಗುತ್ತಿದೆ. ನಿಖಿಲ್ ಅಭಿನಯದ ಎರಡನೆಯ ಚಿತ್ರ 'ಕುರುಕ್ಷೇತ್ರ'ವಾದರೆ, ಮೂರನೆಯ ಚಿತ್ರ 'ಸೀತಾರಾಮ ಕಲ್ಯಾಣ'ವಾಗಿದೆ. ಕುರುಕ್ಷೇತ್ರದಲ್ಲಿ ನಿಖಿಲ್, ಅಭಿಮನ್ಯು ಆಗಿ ಕಾಣಿಸಿಕೊಂಡಿದ್ದು, ಎಲ್ಲರಿಗೂ ಗೊತ್ತಿರುವಂತೆ ಅದೊಂದು ದುರಂತ ನಾಯಕನ ಪಾತ್ರ. ಎರಡನೆಯ ಚಿತ್ರಕ್ಕೇ ದುರಂತ ನಾಯಕನಾಗುವುದು ಬೇಡ, ಮೊದಲು 'ಸೀತಾರಾಮ ಕಲ್ಯಾಣ' ಬಿಡುಗಡೆಯಾಗಲೀ ಎಂಬುದು ನಿಖಿಲ್ ಆಸೆಯಂತೆ. ಆದರೆ, ಡಬ್ಬಿಂಗ್ ಮಾಡಿಬಿಟ್ಟರೆ, 'ಕುರುಕ್ಷೇತ್ರ' ಮೊದಲು ಬಿಡುಗಡೆಯಾಗುತ್ತದೆ. ಹಾಗಾಗಿ `ಕುರುಕ್ಷೇತ್ರ'ವನ್ನು ಸ್ವಲ್ಪ ತಡ ಮಾಡಿ, ಆದಷ್ಟು ಬೇಗ 'ಸೀತಾರಾಮ ಕಲ್ಯಾಣ' ಚಿತ್ರವನ್ನು ಬಿಡುಗಡೆ ಮಾಡುವುದು ನಿಖಿಲ್ ಉದ್ದೇಶ. ಅದೇ ಕಾರಣಕ್ಕೆ ನಿಖಿಲ್ ಇನ್ನೂ ಡಬ್ಬಿಂಗ್ ಮಾಡಿಲ್ಲ ಎಂದು ಹೇಳಲಾಗುತ್ತಿದೆ.   

short by Pawan / more at Eenadu India


Comments