Skip to main content


ಜಪಾನ್ ಹಬ್ಬದಲ್ಲಿ ಬೊಂಬೆ ಹೆಲುತೈತೆ ಮ್ಯಾಜಿಕ್

ರಾಜಕುಮಾರ, ಕಳೆದ ವರ್ಷದ ಸೂಪರ್ ಡ್ಯೂಪರ್ ಹಿಟ್ ಸಿನಿಮಾ. ಚಿತ್ರಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು ಬೊಂಬೆ ಹೇಳುತೈತೆ ಹಾಡು. ಎಷ್ಟರಮಟ್ಟಿಗೆ ಎಂದರೆ, ಬೆಳಗಾವಿಯ ಶಾಲೆಯೊಂದರಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರಲು ಆ ಹಾಡು ಸ್ಫೂರ್ತಿಯಾಗಿತ್ತು. ಆ ಹಾಡು ಕೇವಲ ಕನ್ನಡಿಗರಿಗಷ್ಟೇ ಮೋಡಿ ಮಾಡಿಲ್ಲ. ಜಪಾನೀಯರಿಗೂ ಮೋಡಿ ಮಾಡಿದೆ. ಇತ್ತೀಚೆಗೆ ನಡೆದ ಜಪಾನ್ ಹಬ್ಬದಲ್ಲಿ ಜಪಾನ್ ಯುವಕನೊಬ್ಬ ಬೊಂಬೆ ಹೇಳುತೈತೆ ಹಾಡನ್ನು ವೇದಿಕೆ ಮೇಲೆ ಹಾಡಿರುವ ವಿಡಿಯೋ ವೈರಲ್ ಆಗಿದೆ.       

short by Pawan / more at Chitraloka

Comments