Skip to main content


ಆ್ಯಮಿ ಜಾಕ್ಸನ್ ಪಾಲಿಗೆ ನಿರ್ದೇಶಕ ಪ್ರೇಮ್ ಸ್ವೀಟ್ ಹಾರ್ಟ್!

ಅಂತೂ ಇಂತು ಪ್ರೇಮ್ ನಿರ್ದೇಶನದ ವಿಲ್ಲನ್ ಸಿನಿಮಾ ಶೂಟಿಂಗ್ ಆ್ಯಮಿ ಜಾಕ್ಸನ್ ನಟನೆಯ ಹಾಡಿನೊಂದಿಗೆ ಮುಕ್ತಾಯವಾಗಿದೆ. ಭಾನುವಾರ ರಾತ್ರಿ ಸುದೀಪ್ ಮತ್ತು ಆ್ಯಮಿ ಜಾಕ್ಸನ್  ಹಾಡಿಗೆ ಹೆಜ್ಜೆ ಹಾಕಿದ್ದಾರೆ, ಕೊನೆಯ ಹಂತದ ಶೂಟಿಂಗ್ ಮುಗಿದಿದ್ದು, ಚಿತ್ರತಂಡಕ್ಕೆ ಪ್ರೇಮ್ ಧನ್ಯವಾದ ಅರ್ಪಿಸಿದ್ದಾರೆ. ಇನ್ನೂ ಆ್ಯಮಿ ಜಾಕ್ಸನ್ ಕೂಡ ಸೋಷಿಯಲ್ ಮೀಡಿಯಾದಲ್ಲಿ  ಸಿನಿಮಾ ಶೂಟಿಂಗ್ ಮುಕ್ತಾಯವಾಗಿರುವುದರ ಬಗ್ಗೆ ಬರೆದುಕೊಂಡಿದ್ದಾರೆ,  70 ದಿನಗಳ ಶೂಟಿಂಗ್ ಅಂತ್ಯ ಎಂದು ಹೇಳಿರುವ ಆ್ಯಮಿ ನಿರ್ದೇಶಕ ಪ್ರೇಮ್ ಅವರನ್ನು ಸ್ವೀಟ್ ಹಾರ್ಟ್ ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ ಇಡೀ ಚಿತ್ರತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.   

short by Pawan / more at Kannada Prabha

Comments