Skip to main content


ಈ ಶೋಗೆ ಹೋದ್ಮೇಲೆ ಯಾಕಾದ್ರು ಬಂದೆ ಅಂತಿದ್ದಾರೆ ಸ್ಟಾರ್ಸ್

ಹೊಸ ಹೊಸ ರೀತಿಯಾ ರಿಯಾಲಿಟಿ ಶೋಗಳ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರನ್ನ ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿ ಮತ್ತೊಂದು ರೋಚಕ ಆಟವನ್ನ ನಿಮ್ಮ ಮುಂದೆ ತರುತ್ತಿದೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಸೀಸನ್ ನಾಲ್ಕು ಮುಗಿಸಿದ ಬೆನ್ನಲ್ಲೆ ನಿರೂಪಕ ಅಕುಲ್ ಬಾಲಾಜಿ ಇನ್ನೊಂದು ಹೊಸ ಕಾರ್ಯಕ್ರಮಕ್ಕೆ ಆಂಕರ್ ಆಗಿದ್ದಾರೆ. ಈ ಕಾರ್ಯಕ್ರಮದ ಹೆಸರು 'ಸಿಕ್ಸ್ತ್ಸೆನ್ಸ್' (SixthSense). ಈ ಶೋನ ಪ್ರೋಮೋ ಬಿಡುಗಡೆಯಾಗಿದ್ದು, ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ಗಳು ಭಾಗಿಯಾಗಿದ್ದಾರೆ.

ಆದ್ರೆ, ಈ ಶೋನಲ್ಲಿ ಕಾಣಿಸಿಕೊಂಡಿರುವ ಎಲ್ಲರ ಬಾಯಲ್ಲೂ ಒಂದೇ ಮಾತು, ನಮ್ಮನ್ನ ಬಿಟ್ ಬಿಡ್ರಪ್ಪಾ, ಯಾಕಾದ್ರು ಬಂದ್ನೋ, ನಾನು ಹೋಗ್ಬಿಡ್ತೀನಿ'' ಅನ್ನೋ ಡೈಲಾಗ್ ಗಳೇ ಹೈಲೈಟ್ ಆಗಿದೆ. ಇದನ್ನ ಗಮನಿಸಿದ ಮೇಲೆ ಈ ಶೋ ಬಗ್ಗೆ ಮತ್ತಷ್ಟು ಕುತೂಹಲ, ನಿರೀಕ್ಷೆ ಡಬಲ್ ಆಗುತ್ತಿದೆ. ಏನಿರಬಹುದು, ಯಾವ ರೀತಿಯ ಆಟ, ಟಾಸ್ಕ್ ಇರಬಹುದು ಎಂಬ ಆಲೋಚನೆ, ಕಲ್ಪನೆ ಕಾಣುತ್ತಿದೆ.  

short by Pawan / more at Filmibeat

Comments