Skip to main content


ಶಾಪಿಂಗ್ ಹೊರಟ ಅಂಬರೀಷ್-ಸುಹಾಸಿನಿ

ಅಂಬಿ ನಿಂಗೆ ವಯಸ್ಸಾಯ್ತೊ ಸಿನಿಮಾದ ಕೊನೆಯ ಹಂತದ ಚಿತ್ರೀಕರಣ ಸಾಗುತ್ತಿದ್ದು ಚಿತ್ರದಲ್ಲಿನ ಸನ್ನಿವೇಶಕ್ಕಾಗಿ ಅವರು ಬೆಂಗಳೂರಿನ ಮಾಲ್ ಗಳಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ. ಚಿತ್ರದ ಕಥೆಯಲ್ಲಿ ಮಧ್ಯ ವಯಸ್ಸಿನ ದಂಪತಿ ಯುವವಯಸ್ಸಿನಲ್ಲಿ ಪ್ರೀತಿಸುತ್ತಿದ್ದು ಮಧ್ಯೆ ದೂರವಾಗಿ ಹಲವು ವರ್ಷಗಳ ನಂತರ ಮತ್ತೆ ಸಂಧಿಸುತ್ತಾರೆ.

ಅವರು ಮತ್ತೆ ಭೇಟಿಯಾದ ನಂತರ ಹಾಡೊಂದು ಬರಲಿದ್ದು ಅದರಲ್ಲಿ ಶಾಪಿಂಗ್ ಮಾಡುವುದು, ಒಟ್ಟೊಟ್ಟಿಗೆ ರೆಸ್ಟೋರೆಂಟ್, ಐಸ್ ಕ್ರೀಂ ಪಾರ್ಲರ್ ಗೆ ಹೋಗುವ ಸನ್ನಿವೇಶವಿದೆ ಎನ್ನುತ್ತಾರೆ ನಿರ್ದೇಶಕ ಗುರುದತ್ತ ಗಾಣಿಗ.        

short by Pawan / more at Kannada Prabha

Comments