Skip to main content


ಚಿಲಂನಲ್ಲಿ ರಾಘವೇಂದ್ರ ರಾಜಕುಮಾರ್​​ ನಟಿಸುತ್ತಿಲ್ಲವಂತೆ!

ರಾಘವೇಂದ್ರ ರಾಜಕುಮಾರ್ ಮೂರು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಆ ಪೈಕಿ ಮನೋರಂಜನ್ ರವಿಚಂದ್ರನ್ ಅಭಿನಯದ ಚಿಲಂ ಎಂಬ ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಕೆಲವು ದಿನಗಳ ಹಿಂದೆ ಬಂದಿತ್ತು. ಆದರೆ ಈಗ ಆ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಖುದ್ದು ಅವರೇ ಹೇಳಿ ಕೊಂಡಿದ್ದಾರೆ. ಮಾಧ್ಯಮದವರಿಗಾಗಿ ಹಮ್ಮಿಕೊಂಡಿದ್ದ ಔತಣಕೂಟದಲ್ಲಿ ಮಾತನಾಡಿದ ಅವರು, ಚಿಲಂ ಚಿತ್ರದಲ್ಲಿ ನಟಿಸುವುದು ಅನುಮಾನ ಎಂದು ಹೇಳಿದ್ದಾರೆ. ಈ ಹಿಂದೆ ಚಿಲಂ ಚಿತ್ರದಲ್ಲಿ ನಟಿಸುವುದಾಗಿ ಹೇಳಿದ್ದೆ. ಆದರೆ ಆ ಸುದ್ದಿ ಹೊರ ಬೀಳುತ್ತಿದ್ದಂತೆಯೇ ಕೆಲವು ಅಭಿಮಾನಿಗಳು ಬಂದು ಅಂತಹ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಡಿ ಎಂದು ಹೇಳಿದರು. ವಿಲನ್ ಪಾತ್ರ ಎಂದರೆ ಸಿಗರೇಟ್ ಸೇದುವುದು, ಕುಡಿಯುವುದು ಇರುತ್ತದೆ. ಈಗ ಇವೆಲ್ಲಾ ಬೇಕಾ ಎಂದು ಅಭಿಮಾನಿಗಳು ಕೇಳಿದರು. ಅಭಿಮಾನಿಗಳ ಮಾತನ್ನು ತಳ್ಳಿಹಾಕುವುದಕ್ಕಾಗುವುದಿಲ್ಲ. ನಮ್ಮ ಮೇಲಿನ ಅಭಿಮಾನದಿಂದ ಹೇಳುತ್ತಾರೆ. ಹಾಗಾಗಿ ಚಿಲಂ ಚಿತ್ರದಲ್ಲಿ ನಟಿಸುತ್ತಿಲ್ಲ ಎಂದರು.   

short by Pawan / more at Eenadu India

Comments