Skip to main content


ದರ್ಶನ್, ಸುದೀಪ್ ಹೆಸರಲ್ಲಿ ಸೆಟ್ಟೇರಿತು ಹೊಸ ಸಿನಿಮಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಸರಿನಲ್ಲಿ ಹೊಸ ಸಿನಿಮಾ ಸೆಟ್ಟೇರಲು ತಯಾರಾಗಿದೆ. ಚಿತ್ರಕ್ಕೆ 'ದಚ್ಚು-ದೀಪು' ಎಂದು ಟೈಟಲ್ ಇಡಲಾಗಿದೆ. 'ದಚ್ಚು-ದೀಪು' ಎಂದು ಟೈಟಲ್ ಇಟ್ಟಿರುವ ನಿರ್ದೆಶಕರು ಸಿನಿಮಾಗೆ 'ಫ್ಯಾನ್ಸ್ ನೀವ್ ಅನ್ಕಂಡಗಲ್ಲ ನಾವು' ಎನ್ನುವ ಉಪ ಶೀರ್ಷಿಕೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಶೀರ್ಷಿಕೆ ಹಾಗೂ ಟ್ಯಾಗ್ ಲೈನ್ ಎರಡು ಸುದೀಪ್ ಹಾಗೂ ದರ್ಶನ್ ಅವರನ್ನೇ ಬಿಂಬಿಸುವಂತಿದೆ. 'ದಚ್ಚು-ದೀಪು' ಎನ್ನುವ ಸಿನಿಮಾಗೆ ನವ ನಿರ್ದೇಶಕ ರಂಜಿತ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ದಚ್ಚು-ದೀಪು' ಸಿನಿಮಾದಲ್ಲಿ ಆನಂದ್ ಹಾಗೂ ಚಂದು ನಾಯಕರಾಗಿ ಅಭಿನಯ ಮಾಡುತ್ತಿದ್ದಾರೆ. ಇನ್ನು ನಾಯಕಿಯರ ಪಾತ್ರದಲ್ಲಿ ನಿಶ್ಕಲ ಮತ್ತು ಅರ್ಚನಾ ಸಿಂಗ್ ಕಾಣಿಸಿಕೊಳ್ಳುತ್ತಿದ್ದಾರೆ.    

short by Pawan / more at Filmibeat

Comments