Skip to main content


ಕೊಡುಗು ಜಿಲ್ಲೆ ಸಂತ್ರಸ್ಥರಿಗೆ 10 ಲಕ್ಷ ನೀಡಿದ ನಟ ಶಿವಣ್ಣ

ಭೀಕರ ಪ್ರವಾಹದಿಂದ ಕೊಡುಗು ಜಿಲ್ಲೆ ಗುರುತು ಸಿಗದಂತಾಗಿದ್ದು, ಅಲ್ಲಿನ ನೆರೆ ಸಂತ್ರಸ್ತರಿಗೆ ರಾಜ್ಯದ ಹಲವು ಕಡೆಯಿಂದ ಅಪಾರ ನೆರವು ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ನಟ ಶಿವರಾಜ್ ಕುಮಾರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ನೆರವು ನೀಡಲಿದ್ದಾರೆ. ಸೋಮವಾರ ಸಂಜೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚೆಕ್ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ. ಇದರ ಜೊತೆಗೆ ಅಭಿಮಾನಿಗಳಲ್ಲಿ ಕೂಡ ಶಿವಣ್ಣ ಸಹಾಯ ಮಾಡುವಂತೆ, ಕಾರ್ಯಾಚರಣೆಗೆ ನೆರವಾಗುವಂತೆ ಈಗಾಗಲೇ ಕೋರಿದ್ದಾರೆ.   

short by Pawan!


Comments