Skip to main content


100 ಬಾಲ್​ಗಳ ಕ್ರಿಕೆಟ್​ ಬಗ್ಗೆ ಆಸಕ್ತಿ ಇಲ್ಲ: ಕೊಹ್ಲಿ ಖಡಕ್​ ಮಾತು

ಇಂಗ್ಲೆಂಡ್​ ಮತ್ತು ವೇಲ್ಸ್​ ಕ್ರಿಕೆಟ್​ ಬೋರ್ಡ್​​ ನ ಹೊಸ ಪ್ರಸ್ತಾಪದ ಬಗ್ಗೆ ಟೀಂ ಇಂಡಿಯಾ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಆ ಬಗ್ಗೆ ತಮಗೆ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಟಿ-20 ಮಾದರಿಯಲ್ಲಿ ಟಿ-10 ಇಲ್ಲವೇ 100 ಬಾಲ್​ಗಳ ಕ್ರಿಕೆಟ್​ ಟೂರ್ನಿಗೆ ಇಂಗ್ಲೆಂಡ್​ ಕ್ರಿಕೆಟ್​ ಬೋರ್ಡ್​ ಹೊಸ ರೂಪುರೇಷೆ ಸಿದ್ದಪಡಿಸುತ್ತಿದೆ. ಇದಿನ್ನು ಪ್ರಾಥಮಿಕ ಹಂತದಲ್ಲಿದ್ದು, 2020 ರವೇಳೆಗೆ ಈ ಮಾದರಿ ಕ್ರಿಕೆಟ್​ ಟೂರ್ನಿ ಆಯೋಜಿಸುವ ಸನ್ನಾಹದಲ್ಲಿದೆ. ಈ ಬಗ್ಗೆ ಮಾತನಾಡಿರುವ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ, ವಾಣಿಜ್ಯ ದೃಷ್ಟಿಯಿಂದ ಆಯೋಜಿಸುವ ಇಂತಹ ಪಂದ್ಯಗಳು ಕ್ರಿಕೆಟ್​ನ ಗುಣಮಟ್ಟವನ್ನ ಹಾಳುಗೆಡುವುತ್ತವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.   

short by Pawan / more at Eenadu India

Comments