Skip to main content


ಆಗಸ್ಟ್ 10ರಂದು ಅಂಬಿ ನಿಂಗ್ ವಯಸ್ಸಾಯ್ತೋ ಆಡಿಯೋ ಬಿಡುಗಡೆ: ದಕ್ಷಿಣ ಚಿತ್ರರಂಗದ ದಿಗ್ಗಜರ ಸಮಾಗಮ?

ಗುರುದತ್ತ ಗಣಿಗ ನಿರ್ದೇಶನದ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತ ತಲುಪಿದ್ದು, ಚಿತ್ರ ನಿರ್ಮಾಪಕರು ಮೆಗಾ ಆಡಿಯೋ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಆಗಸ್ಟ್ 10 ರಂದು ಆಡಿಯೋ ಬಿಡುಗಡೆ ಸಮಾರಂಭ ಏರ್ಪಡಿಸಿದ್ದು, ಯಾರ್ಯಾರನ್ನ ಕರೆತರಬೇಕೆಂಬ ಬಗ್ಗೆ ಯೋಜನೆ ರೂಪಿಸುತ್ತಿದೆ. ಈ ಕಾರ್ಯಕ್ರವನ್ನು ಸ್ಮರಣೀಯವಾಗಿಸಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ. ದಕ್ಷಿಣ ಭಾರತದ ಪ್ರಸಿದ್ಧ ತಾರೆಗಳನ್ನು ಕರೆ ತರಲು ಯತ್ನಿಸುತ್ತಿದೆ.   

short by Pawan / more at Kannada Prabha

Comments