Skip to main content


25ನೇ ವರ್ಷದ ಸಂಭ್ರಮದಲ್ಲಿ ಪ್ರಿಯಾ ಸುದೀಪ್

ಇಂದು ಸ್ನೇಹಿತರ ದಿನಾಚರಣೆ. ಸ್ನೇಹಿತರೆಲ್ಲರೂ ತಮ್ಮ ತಮ್ಮ ಗೆಳೆಯ-ಗೆಳತಿಯರಿಗೆ ಸ್ನೇಹ ದಿನದ ಶುಭಾಶಯವನ್ನು ತಿಳಿಸುತ್ತಿದ್ದಾರೆ. ಪ್ರಿಯಾ ಸುದೀಪ್ ಕೂಡ ತಮ್ಮ ಪತಿ ಸುದೀಪ್ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ನಟ ಸುದೀಪ್ ಅವರ ಪತ್ನಿ ಪ್ರಿಯಾ ಅವರು ತಮ್ಮಿಬ್ಬರ 25ನೇ ವರ್ಷದ ಸ್ನೇಹದ ಸಂಭ್ರಮದಲ್ಲಿದ್ದು, ಟ್ವೀಟ್ ಮಾಡುವುದರ ಮೂಲಕ ಸುದೀಪ್ ಅವರಿಗೆ ಶುಭಾಶಯವನ್ನು ತಿಳಿಸಿದ್ದಾರೆ. ಸುದೀಪ್ ಮತ್ತು ಪ್ರಿಯಾ ಅವರು ಸ್ನೇಹಿತರಾಗಿದ್ದು, ನಂತರ ಸ್ನೇಹ ಪ್ರೀತಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಇಂದಿಗೂ ಅವರಿಬ್ಬರ ಸ್ನೇಹ ಹಾಗೆಯೇ ಇದೆ. ಇಂದು ತಮ್ಮ ಸ್ನೇಹ – ಪ್ರೀತಿಯನ್ನು ನೆನಪಿಸಿಕೊಂಡು ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.  

short by Pawan / more at Public Tv

Comments