Skip to main content


3 ಲಕ್ಷ ರೂ. ನೀಡಿ 62 ಕೈದಿಗಳನ್ನು ಜೈಲಿಂದ ಬಿಡಿಸಿದ್ದರು ದುನಿಯಾ ವಿಜಯ್!

ಖಾಸಗಿ ವಾಹಿನಿವೊಂದರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಹಾಡುಗಾರ ಮಹದೇವಪ್ಪ, ದುನಿಯಾ ವಿಜಯ್ ಅವರು ಜೈಲಿನಿಂದ 62 ಕೈದಿಗಳನ್ನು ಬಿಡುಗಡೆ ಮಾಡಿಸಿದ್ದ ಕುರಿತು ರಿವೀಲ್ ಮಾಡಿದ್ದಾರೆ. 2013 ರಲ್ಲಿ ದುನಿಯಾ ವಿಜಯ್ ಅಭಿನಯದ `ದೇವ್ರು’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಚಿತ್ರ ತಂಡ ಜೈಲಿಗೆ ಬಂದಿತ್ತು. ಅದನ್ನು ಗಮನಿಸದೆ ನಾನು ಅಮ್ಮನ ಕುರಿತು ಕವಿತೆ ಬರೆಯುತ್ತಿದ್ದೆ. ಬಳಿಕ ಪುಸ್ತಕ ಎತ್ತಿಟ್ಟು ಊಟ ಮಾಡಲು ತೆರಳಿದ ವೇಳೆ ಕೆಲ ಜನರು ಗುಂಪು ಕಟ್ಟಿಕೊಂಡು ಮಾತನಾಡುತ್ತಿದ್ದರು. ಆಗ ಸ್ವತಃ ದುನಿಯಾ ವಿಜಯ್ ಅವರೇ ನನ್ನ ತಟ್ಟೆಯಿಂದ ಅನ್ನ ತೆಗೆದುಕೊಂಡು ತಿಂದರು. ಇದನ್ನು ಕಂಡು ಅಚ್ಚರಿಗೊಂಡೆ. ಬಳಿಕ ನನ್ನ ಬಳಿ ಮಾತನಾಡಿ ನಾನು ಬರೆಯುತ್ತಿದ್ದ ಪುಸ್ತಕ ತೆಗೆದುಕೊಡುವಂತೆ ಹೇಳಿದರು. ನಾನು ಬರೆದಿದ್ದ ಅಮ್ಮನ ಕುರಿತ ಕವಿತೆ ಓದಿ ಪುಸ್ತಕದಲ್ಲಿ ಸಹಿ ಮಾಡಿದರು ಅಂದ್ರು. ನನ್ನ ಜೊತೆ ಮಾತನಾಡುವ ವೇಳೆ ವಿಜಯ್ ಅವರು ಊಟ ಕೊಡಿಸುವುದಾಗಿ ಹೇಳಿದರು. ಆದರೆ ಈ ವೇಳೆ ಅಲ್ಲಿನ ಕೆಲ ಹಿರಿಯರೊಂದಿಗೆ ಮಾತನಾಡಿ ಊಟ ಬೇಡ ವಿವಿಧ ಕಾರಣಗಳಿಂದ ಹಣ ಕಟ್ಟಲಾಗದೆ ಜೈಲಿನಲ್ಲೇ ಉಳಿದ ಕೆಲ ಕೈದಿಗಳ ಬಿಡುಗಡೆಗೆ ಮನವಿ ಮಾಡಿದೆವು. ಇದನ್ನು ಒಪ್ಪಿದ ದುನಿಯಾ ವಿಜಯ್ ಅವರು ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ 62 ಕೈದಿಗಳ ಬಿಡುಗಡೆಗೆ 3 ಲಕ್ಷ ರೂ. ಹಣವನ್ನು ನೀಡಿದರು ಅಂತ ಮಹದೇವಪ್ಪ ಭಾವುಕರಾದರು.  

short by Pawan / more at Public Tv

Comments