Skip to main content


ಬೇಡಿಕೆಯಿದ್ದರೂ ಚಿತ್ರರಂಗದಿಂದ ದೂರವಿದ್ದ ನಟಿ... 3 ದಶಕಗಳ ಬಳಿಕ ಬೆಳ್ಳಿ ಪರದೆಗೆ ವಾಪಸ್​ !

ನಾವು ಹೇಳ ಹೊರಟಿರುವುದು ಬೇರೆ ಯಾರದೋ ಬಗ್ಗೆಯಲ್ಲ..ಅದೇ ನಮ್ಮ ಮಜಾ ಟಾಕೀಸ್​​ನ ಒನ್ ಆ್ಯಂಡ್ ಓನ್ಲಿ ವರಮಹಾಲಕ್ಷ್ಮೀ ಅಲಿಯಾಸ್​​​ ಅಪರ್ಣಾ. ಇವರು ನಿರ್ದೇಶಕ ದೇವನೂರು ಚಂದ್ರು ಅವರ 'ಗ್ರಾಮಾಯಣ' ಎನ್ನುವ ಚಿತ್ರದ ಮೂಲಕ ಮತ್ತೆ ಸಿನಿಮಾ ಪ್ರಪಂಚಕ್ಕೆ ಕಾಲಿಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ನಟ ವಿನಯ್ ರಾಜಕುಮಾರ್ ಅವರಿಗೆ ತಾಯಿಯಾಗಿ ನಟಿಸುತ್ತಿದ್ದಾರೆ. ​1984 ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಸನದ ಹೂವು' ಅಪರ್ಣಾ ಅವರ ಚೊಚ್ಚಲ ಚಿತ್ರವಾಗಿತ್ತು. ನಂತರ ಇನ್​ಸ್ಪೆಕ್ಟರ್ ವಿಕ್ರಮ್, ನಮ್ಮೂರ ರಾಜ ಸೇರಿದಂತೆ ಹಲವು ಚಿತ್ರದಲ್ಲಿ ಅವರು ನಟಿಸಿದ್ದರು. ನಂತರ ಚಲನಚಿತ್ರಗಳಿಂದ ದೂರ ಉಳಿದಿದ್ದ ಅಪರ್ಣಾ, ರೇಡಿಯೋ, ಟಿವಿ ಧಾರಾವಾಹಿ ಹಾಗೂ ಕಾರ್ಯಕ್ರಮಗಳ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚೆಗೆ ಸೃಜನ್ ಲೋಕೇಶ್ ಅವರ ಮಾಜಾ ಟಾಕೀಸ್​​ನಲ್ಲಿಯೂ ಹಾಸ್ಯ ಕಲಾವಿದೆಯಾಗಿ ಕಾಣಿಸಿಕೊಳ್ಳವ ಮುಲಕ ಫೇಮಸ್​ ಆಗಿದ್ದರು.    

short by Pawan / more at Eenadu India

Comments