Skip to main content


ಅಭಿಮಾನಿಗಳ ಒಡೆಯ ದರ್ಶನ್ ರ 53ನೇ ಸಿನಿಮಾ ಅನೌಸ್..!! ಚಿತ್ರದ ವಿಶೇಷತೆ ಇಲ್ಲಿದೆ‌ ನೋಡಿ..

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಸಿನಿಮಾ ಸ್ಕ್ರಿಪ್ಟ್ ಪೂಜೆ ಇಂದು ಅಯ್ಯಪ್ಪನ ಸನ್ನಿಧಿಯಲ್ಲಿ ನೆರವೇರಿದೆ.. ಅಪ್ಪಟ್ಟ ಸ್ವಾಮಿ ಭಕ್ತರಾದ ದರ್ಶನ್ ತಮ್ಮ 53ನೇ ಸಿನಿಮಾದ ಮುಹೂರ್ತವನ್ನ ಮಲ್ಲೇಶ್ವರಂ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಹಬ್ಬದಂದೆ ನೆರವೇರಿಸಿದ್ದಾರೆ. ಕಳೆದ ಕಲ ದಿನಗಳ ಹಿಂದಷ್ಟೆ ಒಡೆಯ ಸಿನಿಮಾದ ಮುಹೂರ್ತ ವನ್ನ ಮಾಡಿ ಮುಗಿಸಿದ್ದ ದಚ್ಚು , ಈಗ ತನ್ನ ಡಿ 53 ಸಿನಿಮಾಗೆ ಸ್ಕ್ರಿಪ್ಟ್ ಪೂಜೆ ಮೂಲಕ ಚಾಲನೆ ನೀಡಿದ್ದಾರೆ .. ಈ ಸಿನಿಮಾವನ್ನ ಚೌಕ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮಾಡಲ್ಲಿದ್ದಾರೆ. ಚಿತ್ರಕ್ಕೆ‌ ಹೆಬ್ಬುಲಿ‌ ನಿರ್ಮಾಪಕರಾದ ಉಮಾಪತಿ ಬಂಡವಾಳ ಹೂಡಲ್ಲಿದ್ದಾರೆ . ಚೌಕ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಬರ್ಟ್ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಂಡಿದ್ರು .. ವಿಶೇಷ ಪಾತ್ರದಲ್ಲಿ ಮಿಂಚಿದ್ದ ಈ ಗಜ ಸಿನಿಮಾದ ತೂಕವನ್ನ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ರು .. ಈಗ ಇದೇ ಹೆಸರಿನಲ್ಲಿ ಸೆಟ್ಟೇರಲಿದೆ ಡಿ ಬಾಸ್ 53 ಸಿನಿಮಾ ಅಂತ ಹೇಳಲಾಗುತ್ತಿದೆ.   

short by Pawan / more at Vahini Tv

Comments